ಮಂಗಳೂರು ಲೋಕಾಯುಕ್ತ ಇಲಾಖೆಯ ಚಾಲಕ ವಿಟ್ಲದ ನಿವಾಸಿ ಲಾಡ್ಜ್‌ನಲ್ಲಿ ನಿಗೂಢ ಆತ್ಮಹತ್ಯೆ..!

12:38 AM, Thursday, August 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

lokeshವಿಟ್ಲ ; ಮಂಗಳೂರು ಲೋಕಾಯುಕ್ತ ಇಲಾಖೆಯಲ್ಲಿ ಚಾಲಕರಾಗಿದ್ದ ಕೊಳ್ನಾಡು ಗ್ರಾಮದ ನಿವಾಸಿ ಚೆನ್ನರಾಯಪಟ್ಟಣದ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ನಿಗೂಢವಾಗಿದೆ.

ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಸೀನ ಆಚಾರ್ಯರ ಪುತ್ರ ಲೋಕೇಶ್೩೫)ಮೃತಪಟ್ಟ ಚಾಲಕ. ಕಳೆದ ಕೆಲವರ್ಷಗಳಿಂದ ಮಂಗಳೂರು ಲೋಕಾಯುಕ್ತ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯದಲ್ಲಿದ್ದ ಲೋಕೇಶ್ ಮಂಗಳವಾರ ಸಂಜೆಯಿಂದ ಮೇಲಾಧಿಕಾರಿಗಳಲ್ಲಿ ಮಾಹಿತಿ ನೀಡದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನಂದಗೋಕುಲ ಲಾಡ್ಜ್ ನಲ್ಲಿ ಮಂಗಳವಾರ ರಾತ್ರಿ ೧೦ಗಂಟೆಯ ಸುಮಾರಿಗೆ ಲೋಕೇಶ್ ರೂಮ್ ಪಡೆದಿದ್ದರೆನ್ನಲಾಗಿದೆ. ಬುಧವಾರ ಬೆಳಗ್ಗೆ ತಡಹೊತ್ತಿನ ವರೆಗೂ ಬಾಗಿಲು ತೆರೆಯದಿದ್ದ ಕಾರಣ ಅನುಮಾಗೊಂಡ ಲಾಡ್ಜ್ ಸಿಬ್ಬಂದಿಗಳು ಬಾಗಿಲು ಒಡೆದು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಲೋಕೇಶ್ ಪತ್ತೆಯಾಗಿದ್ದಾರೆ.

ಮಂಗಳವಾರ ಸಂಜೆ ಮಂಗಳೂರಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಲೋಕೇಶ್ ಚೆನ್ನರಾಯಪಟ್ಟಣದ ಲಾಡ್ಜಿಗೆ ಅದ್ಯಾಕೆ ಹೋಗಿದ್ದರು. ಅವಿವಾಹಿತರಾಗಿದ್ದ ಇವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಯಾಕೆ ಬಂತೆಂಬುದು ಪೊಲೀಸರ ತನಿಖೆಯಿಂದ ಇನ್ನಷ್ಟೆ ಬಯಲಾಗಬೇಕಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English