ಮಂಗಳೂರು : ಬಹುನಿರೀಕ್ಷೆಯ, ಬಹುತಾರಾಗಣದ ಹಾಸ್ಯ ಪ್ರಧಾನ ತೆಲಿಕೆದ ಬೊಳ್ಳಿ ಚಿತ್ರವು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 6ರಂದು ತೆರೆಕಾಣಲಿದೆ. ಈ ಸಂಬಂಧ ಮಂಗಳವಾರ ನಗರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲಿಕೆದ ಬೊಳ್ಳಿ ಚಿತ್ರದ ಪ್ರಮುಖ ನಟ ಹಾಗೂ ಚಿತ್ರಕಥೆ, ಸಂಭಾಷಣೆ ಬರೆದ ದೇವದಾಸ್ ಕಾಪಿಕಾಡ್ ರವರು ಮಾಹಿತಿ ನೀಡಿದರು. ಸುಧೀರ್ ಕಾಮತ್ ಮತ್ತು ಶರ್ಮಿಳಾ ದೇವದಾಸ್ ಕಾಪಿಕಾಡ್ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ಎಚ್. ವಿಶ್ವನಾಥ್ ಅವರ ನಿರ್ದೇಶನವಿದೆ. ಆರ್. ಮಂಜುನಾಥ್ ಅವರ ಛಾಯಾಗ್ರಹಣ, ಗುರುಕಿರಣ್ ಅವರ ಸಂಗೀತ ನಿರ್ದೇಶನ ಹಾಗೂ ಮದನ್ ಹರಿಣಿ ನೃತ್ಯವಿದೆ. ಕುಸಲ್ದರಸೆ ನವೀನ್ ಡಿ. ಪಡೀಲ್ ಸೇರಿದಂತೆ ತುಳು ರಂಗಭೂಮಿಯ ಅತ್ಯಂತ ಶ್ರೇಷ್ಠ ಹಾಸ್ಯ ಕಲಾವಿದರು ಮತ್ತು ಇತರ ಕಲಾವಿದರ ಜತೆಗಾರಿಕೆಯಲ್ಲಿ ಚಿತ್ರ ಇನ್ನಷ್ಟು ನವಿರಾಗಿ ಮೂಡಿದೆ ಎಂದು ಅವರು ತಿಳಿಸಿದರು.
ಮಂಗಳೂರಿನ ಸೆಂಟ್ರಲ್, ಜ್ಯೋತಿ ಹಾಗೂ ಬಿಗ್ ಸಿನಿಮಾಸ್‌ನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಮತ್ತು ಉಡುಪಿಯ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ ಮೊದಲಾದ ಚಿತ್ರಮಂದಿರಗಳಲ್ಲಿ ‘ತೆಲಿಕೆದ ಬೊಳ್ಳಿ’ ಡಿಸೆಂಬರ್ 6ರಂದು ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ನವಿರಾದ ಪ್ರೇಮಕಥೆಯನ್ನೇ ಆಧಾರವಾಗಿಟ್ಟುಕೊಂಡು ಹೆಣೆದ ಚಿತ್ರ ‘ತೆಲಿಕೆದ ಬೊಳ್ಳಿ’. ಕಥೆಗೆ ಪೂರಕವಾಗಿ ಕರಾವಳಿಯ ಅದ್ಬುತ ಹಾಸ್ಯ ಕಲಾವಿದರ ಜತೆಯಾಟ ಈ ಚಿತ್ರದ ಹೈಲೈಟ್ಸ್
ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರ್ಜುನ್ ಕಾಪಿಕಾಡ್, ಆಶ್ರಿತ ಶೆಟ್ಟಿ, ಅರವಿಂದ ಬೋಳಾರ್, ಸಾಯಿಕೃಷ್ಣ, ರಮಾ ಬಿ.ಸಿ.ರೋಡ್, ಲಕ್ಷ್ಮಣ್ ಕುಮಾರ್ ಮಲ್ಲೂರು, ಸದಾಶಿವ ಅಮಿನ್, ಸಂದೀಪ್ ಶೆಟ್ಟಿ , ಪ್ರದೀಪ್ ಆಳ್ವ, ಕು.ವೈಶಾಲಿ ಶೆಟ್ಟಿ, ಮೋಹನ್ ಕರ್ನೂರು, ಸರೋಜಿನಿ ಶೆಟ್ಟಿ ಮೊದಲಾದವರು ತಾರಾಗಣದಲ್ಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಸುಧೀರ್ ಕಾಮತ್, ಶರ್ಮಿಳಾ ದೇವದಾಸ್ ಕಾಪಿಕಾಡ್, ನಾಯಕ ನಟ ಅರ್ಜುನ್ ಕಾಪಿಕಾಡ್, ಚಿತ್ರದ ಪ್ರಮುಖ ಕಲಾವಿದರಾದ ನವೀನ್ ಡಿ. ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English