ಭಾರತ್ ಬ್ಯಾಂಕ್, ನೂತನ ಕಾರ್ಯಾಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಆಯ್ಕೆ

6:20 PM, Monday, August 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shivaji-Poojaryಮುಂಬಯಿ : ಮಹಾನಗರದ ಬಿಲ್ಲವರ ಅಸೋಷಿಯೇಶನ್ ಪ್ರಾಯೋಜಕತ್ವದ ಪ್ರತಿಷ್ಟಿತ ಭಾರತ್ ಕೋ ಅಪರೇಟಿವ್ ಬ್ಯಾಂಕಿನ ನೂತನ ಕಾರ್ಯಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ಬ್ಯಾಂಕಿಗ್ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಇವರು ಭಾರತ್ ಬ್ಯಾಂಕಿನ ನಿರ್ದೇಶಕರಾಗಿ ಧೀರ್ಘಕಾಲ ಸೇವೆ ಸಲ್ಲಿಸಿರುವರು.

ಬ್ಯಾಂಕಿನ ಕಾಯ್ಯಾಧ್ಯಕ್ಷರಾದ ಜಯ ಸಿ ಸುವರ್ಣ ಇವರ ಉಪಸ್ಥಿತಿಯಲ್ಲಿ ಆಗಸ್ಟ್ 16ರಂದು ಬ್ಯಾಂಕಿನ ಕೇಂದ್ರ ಕಾರ್ಯಾಲಯದಲ್ಲಿ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಉಪ್ಪೂರು ಶಿವಾಜಿ ಪೂಜಾರಿ ಯವರನ್ನು ಆಯ್ಕೆಮಾಡಲಾಯಿತು. ಬ್ಯಾಂಕಿನ ಕಾರ್ಯಧ್ಯಕ್ಷರಾಗಿ ಸುದೀರ್ಘಕಾಲ ಅಧಿಕಾರ ವಹಿಸಿಕೊಂಡಿದ್ದು ಜಯ ಸಿ. ಸುವರ್ಣ ರ ಕಾಲಾವಧಿಯಲ್ಲಿ ಭಾರತ್ ಬ್ಯಾಂಕ್ ತನ್ನ ವ್ಯವಹಾರದಲ್ಲಿ ಅಗ್ರಸ್ಥಾನವನ್ನು ಗುರುತಿಸಿ ಹಲವಾರು ಸಾಧನಾ ಪ್ರಶಸ್ತಿಗಳನ್ನು ಗಳಿಸಿದೆ. ಈಗಾಗಲೇ ಮಹಾರಾಷ್ಟ್ರ, ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ 102 ಶಾಖೆಗಳು ಹಾಗೂ ಒಂದು ವಿಸ್ತರಿತ ಶಾಖೆಯನ್ನು ಹೊಂದಿದ ಭಾರತ್ ಬ್ಯಾಂಕ್ 19 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುತ್ತಿದೆ.

ಇಂದು ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ನ್ಯಾ. ರೋಹಿಣಿ ಸಾಲ್ಯಾನ್, ವಾಸುದೇವ ಆರ್ ಕೋಟ್ಯಾನ್, ಜ್ಯೋತಿ ಕೆ ಸುವರ್ಣ, ಭಾಸ್ಕರ ಎಂ ಸಾಲ್ಯಾನ್, ಜಯ ಎ. ಕೋಟ್ಯಾನ್, ನ್ಯಾ. ಸೋಮನಾಥ ಬಿ. ಅಮೀನ್, ಗಂಗಾಧರ ಜೆ. ಪೂಜಾರಿ, ಸೂರ್ಯಕಾಂತ್ ಜೆ ಸುವರ್ಣ, ಎನ್. ಟಿ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಮೋಹನ್ ದಾಸ್ ಎ. ಪೂಜಾರಿ, ಪ್ರೇಮನಾಥ ಪಿ ಕೋಟ್ಯಾನ್, ಶಾರದಾ ಎಸ್ ಕರ್ಕೇರ, ಅನ್ ಬಲಗನ್ ಸಿ ಹರಿಜನ್, ರಾಜಾ ವಿ ಸಾಲ್ಯಾನ್, ಬ್ಯಾಂಕಿನ ಎಂ. ಡಿ. ಹಾಗೂ ಸಿ.ಇ.ಓ. ವಿದ್ಯಾನಂದ ಎಸ್ ಕರ್ಕೇರ ಹಾಗೂ ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್ ಉಪಸ್ಥಿತರಿದ್ದರು. ಸಭೆಯಲ್ಲಿ ಅನುಪಸ್ಥಿತಿ ಯಿದ್ದ ನಿರ್ದೇಶಕ ಎಲ್ ವಿ ಅಮೀನ್ ಅವರು ನೂತನ ಕಾರ್ಯಧ್ಯಕ್ಷ ರಿಗೆ ಶುಭಹಾರೈಸಿದ್ದಾರೆ ಹಾಗೂ ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ನ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿದೆ.

ವರದಿ : ಈಶ್ವರ ಎಂ. ಐಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English