ಕುಲಾಲ ಸಂಘ ಮುಂಬಯಿ ವತಿಯಿಂದ ವಿಕಲಚೇತನ ಭಾಗ್ಯಶ್ರೀ ವಿದ್ಯಾಭ್ಯಾಸಕ್ಕೆ ನೆರವು

11:27 PM, Wednesday, August 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bhagyasriಮುಂಬಯಿ : ಬಡತನ, ಅಂಗ ವೈಕಲ್ಯ ವನ್ನೂ ಮೀರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 467 ಅಂಕ ಪಡೆದಿರುವುದು, ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಬಂಟ್ವಾಳದ ಭಾಗ್ಯಶ್ರೀ. ಗೆ ಮುಂಬಯಿ ಕುಲಾಲ ಸಂಘದ ಸದಸ್ಯರ ಸಹಕಾರದಿಂದ 50000 ವಿದ್ಯಾಭ್ಯಾಸಕ್ಕಾಗಿ ನೀಡಲಾಯಿತು

ಭಾಗ್ಯಶ್ರೀ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಸುಪುತ್ರಿ. ತಂದೆ ಕೇಶವರು ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ತಾಯಿಗೆ ಬೀಡಿ ಕಟ್ಟುವುದೇ ಕಾಯಕ. ಭಾಗ್ಯಶ್ರೀ ಕಿರಿಯವಳು.

ಈಕೆಗೆ ಸೊಂಟದ ಕೆಳಗೆ ಬಲವೇ ಇಲ್ಲ : ಆದರೆ ಕಲಿಕೆಯಲ್ಲಿ ಭಾರೀ ಆಸಕ್ತಿ. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾಳೆ. ಅಮ್ಮ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ ೪೭೦ ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ ಇವಳದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ. ಇನ್ನು ಮನೆಯಲ್ಲಿಯೇ ಇದ್ದು ಬಿ.ಕಾಂ. ಕಲಿಯಬೇಕೆಂಬ ಆಸೆ ಯನ್ನು ಹೊಂದಿದ ಪ್ರತಿಭಾವಂತೆ ಭಾಗ್ಯಶ್ರೀ ಗೆ ಮುಂಬಯಿಯ ಕುಲಾಲ ಸಂಘವು ಆರ್ಥಿಕ ಸಹಾಯವನ್ನು ಒದಗಿಸಲು ಮುಂದೆ ಬಂದಿದ್ದು ಸಮಾಜದ ಹಲವಾರು ಗಣ್ಯರು ತಮ್ಮ ಬೆಂಬಲವನ್ನು ಸೂಚಿಸಿದ್ದು ಈಗಾಗಲೇ .ಸುನಿಲ್ ಆರ್ ಸಾಲ್ಯಾನ್ ಬಾಯ್ಕಲ. ಜಗದೀಶ್ ಆರ್ ಬಂಜನ್, ಅಂಬರ್ ನಾಥ್, ಸಾಯಿನಾಥ. ಬಿ. ಸಾಲ್ಯಾನ್ ದುಬಾಯಿ, ಆನಂದ ಕುಲಾಲ್ ಜೋಗೇಶ್ವರಿ, ದೇವದಾಸ ಎಲ್ ಕುಲಾಲ್ ಡೊಂಬಿವಲಿ , ಡಿ. ಐ. ಮೂಲ್ಯ ಕಲ್ಯಾಣ್ , ಮಮತಾ ಎಸ್ ಗುಜರನ್, ಆಶಲತಾ ಮೂಲ್ಯ ಗೋರೆಗಾವ್, ರಘು ಮೂಲ್ಯ ಖಾರ್ ಘರ್, ಮಾಲತಿ ಅಂಚನ್ ಐರೋಲಿ, ಸುಧಾಕರ್ ಟಿ. ಕುಲಾಲ್ ರಬಾಲೆ. ದಿವಾಕರ್ ಮೂಲ್ಯ ಏರೋಲಿ. ಪ್ರೇಮ ಎಲ್ ಮೂಲ್ಯ ವಾಶಿ. ಅಶ್ವಿತಾ ಮೂಲ್ಯ ವಾಶಿ. ಧನವಂತಿ ಎಸ್ ಬಂಜನ್ .ವಿಶ್ವನಾಥ್ ಮೂಲ್ಯ. ರೇಣುಕ ಸಾಲಿಯನ್ ಮೀರಾರೋಡ್. ಜಯ ಎಸ್ ಅಂಚನ್ ಏರೋಲಿ. ಪಿ ಶೇಖರ್ ಮೂಲ್ಯ. ಸಂಜೀವ ಬಂಗೇರ ಸಾಯನ್ ಸದಾನಂದ ಎಸ್ ಕುಲಾಲ್ ವಾಸಿ. ಜಯರಾಜ್ ಪಿ ಸಾಲ್ಯಾನ್ ಘಾಟ್ಕೋಪರ್. ಮೊದಲಾದವರು ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ.

ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ ಎಲ್ ಕುಲಾಲ್, ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಗೌರವ ಪ್ರದಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್, ಅಮೂಲ್ಯ ಸಂಪಾದಕ ಶಂಕರ್ ವೈ ಮೂಲ್ಯ, ಜ್ಯೋತಿ ಕೋಅಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್. ಬಿ. ಸಾಲ್ಯಾನ್ ಭಾಗ್ಯಶ್ರೀಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು. ದಾನಿಗಳ ಸಹಾಯಕ್ಕೆ ಕೃತಜ್ನತೆ ಸಲ್ಲಿಸಿರುವರು.

ಕುಲಾಲ ಸಂಘ ಮುಂಬಯಿ ಆಸಕ್ತ ಕುಲಾಲ ಸಮಾಜದ ಬಂಧುಗಳಿಗೆ ನಿರಂತರವಾಗಿ ಕಳೆದ 90 ವರ್ಷಗಳಿಂದ ಸಹಕಾರ ನೀಡುತ್ತ ಬಂದಿದೆ ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 300 ಕುಟುಂಬಗಳಿಗೆ ಐದು ಲಕ್ಷಕ್ಕೂ ಮಿಕ್ಕಿ ದಿನ ಸಾಮಾಗ್ರಿಗಳನ್ನು ನೀಡಿದೆ

ವರದಿ : ಈಶ್ವರ ಎಂ ಐಲ್
ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English