ಮಂಗಳೂರು : ನಗರದ ಲಾಡ್ಜ್ವೊಂದರಲ್ಲಿ ಮೂವರು ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿ ದ್ದಾರೆ.
ಕಡಂದಲೆ ನಿವಾಸಿ ಹರೀಶ್(45), ಬೊಳುವಾರು ನಿವಾಸಿ ಸಾಗರ್ (40) ಬಂಧಿತ ಆರೋಪಿಗಳು.
ನಗರದ ಪಂಪ್ವೆಲ್ ಲಾಡ್ಜ್ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಹರೀಶ್ ಲಾಡ್ಜ್ ಸಿಬ್ಬಂದಿಯಾಗಿದ್ದರೆ, ಸಾಗರ್ ದಲ್ಲಾಳಿಯಾಗಿದ್ದ. ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English