ಉಡುಪಿ : ಕಂಟೈನರ್ ಲಾರಿಯಲ್ಲಿ ಉತ್ತರಪ್ರದೇಶದಿಂದ ಮಂಗಳೂರಿಗೆ ಬಿದಿರು ತುಂಬಿಸಿಕೊಂಡು ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕು ಹೇರೂರು ಬಳಿ ಪೊಲೀಸರು ತಡೆದು ತಪಾಸಣೆ ನಡೆಸಿ ಸುಮಾರು 49 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರು ತಮಿಳುನಾಡಿನ ತಿರುವನ್ ವೆಲ್ಲಿ ಜಿಲ್ಲೆಯ ಕರುತಪಾಂಡಿ (40) ಮತ್ತು ಪಶ್ಚಿಮ ಬಂಗಾಳದ ವಾನು ಹಲ್ ದಾರ್ (30) ಎಂದು ಗುರುತಿಸಲಾಗಿದೆ.
ಆರೋಪಿಗಳು ಬಿದಿರಿನ ಒಳಗೆ ಗಾಂಜಾವನ್ನು ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಮಂಜಪ್ಪ, ಎಎಸ್ಐ ರವಿಚಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ದಯಾನಂದ್, ರಾಜ್ ಕುಮಾರ್, ಚಂದ್ರ ಶೆಟ್ಟಿ, ಸುರೇಶ್, ರಾಘವೇಂದ್ರ, ಶಿವಾನಂದ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English