ತಂಬಾಕು ಹಾಗೂ ಪಾನ್ ಮಸಾಲ ಜಗಿದು ಉಗಿಯುವುದರಿಂದ ಕೋವಿಡ್ 19, ದಂಡ ವಸೂಲಿ

11:37 PM, Saturday, August 22nd, 2020
Share
1 Star2 Stars3 Stars4 Stars5 Stars
(No Ratings Yet)
Loading...

siptting ಮಂಗಳೂರು : ಸಾರ್ವನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್ 19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವ ಸಂಭವ ಹೆಚಾಗ್ಚಿದು, ಆ ಕಾರಣದಿಂದ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ತಂಡವು ಆಗಸ್ಟ್ 20 ರಂದು ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಹಾಗೂ COTPA-2003 ಕಾಯಿದೆ ಉಲ್ಲಂಘನೆ ವಿರುದ್ಧ ಉರ್ವಸ್ಟೋರ್ ಪರಿಸರದಲ್ಲಿ ಕಾರ್ಯಚರಣೆ ನಡೆಸಿ 21 ಕೇಸ್ ದಾಖಲಿಸಿ ಸುಮಾರು ರೂ. 2100 ದಂಡ ವಿಧಿಸಲಾಯಿತು. ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲೀಕರಿಗೆ ಮಾಹಿತಿ ನೀಡಲಾಯಿತು.

ಈ ತಂಡದಲ್ಲಿ ಹಿರಿಯ ಆಹಾರ ಸುರಕ್ಷತಾಧಿಕಾರಿ ರಾಜು, ಸಮಾಜ ಕಾರ್ಯಕರ್ತರಾದ ಶ್ರುತಿ ಸಾಲ್ಯಾನ್, ವಿಜಯ್ ಕುಮಾರ್, ಉರ್ವ ಸ್ಟೋರ್ ಠಾಣಾ ಪೊಲೀಸ್ ಸಿಬ್ಬಂದಿ ಪ್ರತಾಪ್, ವಿದ್ಯಾ ಮತ್ತಿತರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English