ಕಾಸರಗೋಡು : ವಾಹನ ಕಳವು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗುರುತಿಸಿಕೊಂಡ ಆರೋಪಿ ಕೊರೊನಾ ಸೋಂಕಿತ ವ್ಯಕ್ತಿ ಕ್ವಾರಂಟೈನ್ ಕೇಂದ್ರದಿಂದ ಎರಡನೇ ಬಾರೀ ಪರಾರಿಯಾ ಘಟನೆ ನಡೆದಿದೆ.
ಕಾಸರಗೋಡು ತೆಕ್ಕಿಲ್ ಮಾಂಗಾಡ್ ನ ರಂಶಾನ್ ಸೈನುದ್ದೀನ್(20) ಪರಾರಿಯಾದವನು.
ಕೆಲ ದಿನಗಳ ಹಿಂದೆ ಕಣ್ಣೂರು ಎಡಕ್ಕಾಡ್ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಈತನನ್ನು ಹಿಡಿದು ಬಳಿಕ ಅಂಜರ ಕಂಡಿಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಈ ಕೆಂದ್ರದಿಂದಲೂ ಈತ ತಪ್ಪಿಸಿಕೊಂಡಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಈತನಿಗಾಗಿ ಶೋಧ ನಡೆಯುತ್ತಿದೆ.
ಈತನನ್ನು ಎಡಕ್ಕಾಡ್ ಪೊಲೀಸರು ಬಂಧಿಸಿ ಕ್ವಾರಂಟೈನ್ ನಲ್ಲಿರಿಸಿದ್ದ ಬಳಿಕ ಈತ ತಪ್ಪಿಸಿಕೊಂಡಿದ್ದನು. ಬಳಿಕ ಈತನನ್ನು ಕಳೆದ ಬುಧವಾರ ಚೆಮ್ನಾಡ್ ಸೇತುವೆ ಸಮೀಪದಿಂದ ಕಾಸರಗೋಡು ಸರ್ಕಲ್ ಇನ್ಸ್ ಪೆಕ್ಟರ್ ಪಿ. ರಾಜೇಶ್ ನೇತೃತ್ವದ ಪೊಲೀಸ್ ತಂಡ ಬಂಧಿಸಿ ಎಡಕ್ಕಾಡ್ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಅಂಜರಕಂಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿಗಾ ಕೇಂದ್ರದಲ್ಲಿದ್ದ ಈತ ಅಲ್ಲಿಂದ ಸೋಮವಾರ ಬೆಳಿಗ್ಗೆ ತಪ್ಪಿಸಿ ಪರಾರಿಯಾಗಿದ್ದಾನೆ. ಈತನಿಗಾಗಿ ಕಣ್ಣೂರು ಚಕ್ಕರಕ್ಕಲ್ ಹಾಗೂ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ, ಈ ನಡುವೆ ಈತನ ಕೊರೊನಾ ತಪಾಸಣಾ ವರದಿ ಇಂದು ಬಂದಿದ್ದು, ಪಾಸಿಟಿವ್ ಎಂದು ದ್ರಢಪಟ್ಟಿದೆ.
Click this button or press Ctrl+G to toggle between Kannada and English