ಕೊರೊನಾ ಸೊಂಕು : ದಕ್ಷಿಣ ಕನ್ನಡ 334, ಉಡುಪಿ 254

12:47 AM, Monday, August 31st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

CORONA ಮಂಗಳೂರು, : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರದಂದು 334 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12443ಕ್ಕೆ ಏರಿಕೆಯಾಗಿದೆ.

ರವಿವಾರ ಮತ್ತೆ 213 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಒಟ್ಟು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 9422ಕ್ಕೆ ಏರಿಕೆಯಾಗಿದೆ. ಇನ್ನು 2665 ಮಂದಿ ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಆ. 30ರಂದು ಮತ್ತೆ 6 ಮಂದಿ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 356ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 82770 ಇಲ್ಲಿಯ ತನಕ ದೃಢಪಟ್ಟ ನೆಗೆಟಿವ್ ಪ್ರಕರಣಗಳಾಗಿವೆ.

ಉಡುಪಿ ಜಿಲ್ಲೆಯಲ್ಲಿ ರವಿವಾರ 254 ಮಂದಿಗೆ ಸೊಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 11506 ಕ್ಕೆ ಏರಿಕೆಯಾಗಿದೆ. ಈ ಪೈಕಿ ಪ್ರಾಥಮಿಕ ಸಂಪರ್ಕದಿಂದ 107 ಮಂದಿಗೆ ಸೊಂಕು ದೃಢಪಟ್ಟಿದೆ.

92 ಮಂದಿಯಲ್ಲಿ ಐಎಲ್ಐ ಪ್ರಕರಣ ವರದಿಯಾಗಿದೆ. ನಾಲ್ವರಲ್ಲಿ ಸಾರಿ ಪ್ರಕರಣವಾಗಿದ್ದು, 47 ಮಂದಿಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಮುಂದುವರೆಸಲಾಗಿದೆ. ಇನ್ನು ನಾಲ್ವರು ಅಂತರ್ ರಾಜ್ಯ ಪ್ರಯಾಣ ಮುಗಿಸಿ ಬಂದವರಲ್ಲಿ ಸೊಂಕು ದೃಢಪಟ್ಟಿದೆ.

ರವಿವಾರದಂದು ಜಿಲ್ಲೆಯಲ್ಲಿ 195 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2620 ಸಕ್ರಿಯ ಪ್ರಕರಣಗಳಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English