ಮಲೈ ಮಹದೇಶ್ವರ ಸ್ವಾಮಿಯ ಕ್ಷೇತ್ರ ಮಹಿಮೆ

7:00 AM, Monday, August 31st, 2020
Share
1 Star2 Stars3 Stars4 Stars5 Stars
(No Ratings Yet)
Loading...

MaleMadeshwara ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ,ರುದ್ರಾಕ್ಷಿ ಮಲೆ,ವಿಭೂತಿಮಲೆ, ಕೊಂಗುಮಲೆ ಇವೆಲ್ಲ ಏಳು ಬೆಟ್ಟಗಳನ್ನು ಸೇರಿಸಿ ಮಹದೇಶ್ವರ ಬೆಟ್ಟ ಎಂದು ಹೇಳಲಾಗುತ್ತದೆ.

ಮಹದೇಶ್ವರ ದೇವಸ್ಥಾನವನ್ನು ಹಾಲುಮತದ ಕುರುಬ ಗೌಡ ಜನಾಂಗದ ಜುಂಜೇಗೌಡರು ಕಟ್ಟಿಸಿದ್ದಾರೆ ಎಂಬುದು ಪ್ರತೀತಿ ಇದೆ .

ಈ ಬೆಟ್ಟದಲ್ಲಿ ತಂತ್ರಗಳು ಅವ್ಯಾಹತವಾಗಿ ನಡೆಯುತ್ತಿದ್ದು ಶ್ರವಣ ಎಂಬುವನ ಪಾರುಪತ್ಯ ಹೆಚ್ಚಾಗಿತ್ತು ಇವನ ಅಡಿಯಲ್ಲಿ ಸಾಧು ಸನ್ಯಾಸಿಗಳು ಬಂಧನದಲ್ಲಿ ಜೀವನ ಸಾಗಿಸುತ್ತಿದ್ದರು, ಇದನ್ನು ಮಹದೇಶ್ವರ ಸ್ವಾಮಿಯು ಆತನ ವಿರುದ್ಧವಾಗಿ ವಿಜಯ ಸಾಧಿಸಿ ಅಲ್ಲಿನ ಜನರನ್ನು ರಕ್ಷಿಸಿದರು ಎಂಬ ನಂಬಿಕೆ ಇದೆ.

ಈ ಮಹದೇಶ್ವರಬೆಟ್ಟದಲ್ಲಿ ಸುತ್ತಲೂ ಕಾಡು ಆವರಿಸಿದ್ದು ಇಲ್ಲಿ ಸಾಧುಸಂತರು ತಮ್ಮ ತಪಸ್ಸನ್ನು ಆಚರಿಸಲು ಅತಿಹೆಚ್ಚಾಗಿ ಅವಲಂಬಿಸಿದ್ದರು. ಇಂತಹ ಪುಣ್ಯ ತಪಸ್ವಿ ಕ್ಷೇತ್ರವಾಗಿರುವ ಮಹದೇಶ್ವರ ಕ್ಷೇತ್ರವನ್ನು ಈಗಲೂ ಭಕ್ತಾದಿಗಳು ಅಷ್ಟೇ ನಂಬಿಕೆಯಿಂದ ಆರಾಧಿಸುತ್ತಾರೆ.

ದಟ್ಟ ಕಾನನವನ್ನು ತನ್ನ ವಾಸಯೋಗ್ಯ ಕ್ಷೇತ್ರವನ್ನಾಗಿ ಮಾಡಿಕೊಂಡು ಮಹದೇಶ್ವರ ಸ್ವಾಮಿ ಇಲ್ಲಿ ಸ್ಥಿತರಾಗಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಹಾಗೂ ಕಷ್ಟಗಳಿಂದ ರಕ್ಷಿಸುವ ಆರಾಧ್ಯ ದೈವವಾಗಿದ್ದಾರೆ. ಬಾಲಯೋಗಿ ಮಹದೇಶ್ವರರು ಹುಲಿಯನ್ನೇ ತನ್ನ ವಾಹನವನ್ನಾಗಿಸಿ ಕೊಂಡಿದ್ದರು, ಇವರು ಹರದನಲ್ಲಿ ಮಠದ ಮೂರನೇ ಮಠಾಧಿಪತಿಗಳು ಆಗಿದ್ದರು.

ದೇಶದ ಮೂಲೆ ಮೂಲೆಗಳಲ್ಲಿ ಸ್ವಾಮಿಯ ಭಕ್ತಾದಿಗಳು ಇಲ್ಲಿ ತಪ್ಪದೆ ನಡೆಯುವರು. ಇದು ಕರ್ನಾಟಕ ಮತ್ತು ತಮಿಳುನಾಡಿನ ಅಂದರೆ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಗಡಿಯಲ್ಲಿ ಹಬ್ಬಿದೆ ಕರ್ನಾಟಕ ರಾಜ್ಯದ ಚಾಮರಾಜನಗರದ ಜಿಲ್ಲೆಯಲ್ಲಿ ಈ ಕ್ಷೇತ್ರವು ಇದ್ದು ನೀವು ಸಹ ಒಮ್ಮೆ ಭೇಟಿ ನೀಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English