ಹೊಸ ದಿಲ್ಲಿ: ಭಾರತರತ್ನ ಪ್ರಶಸ್ತಿ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊರೊನಾ ವೈರಸ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋಮಾಗೆ ಜಾರಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
84 ವರ್ಷ ವಯಸ್ಸಿನ ಪ್ರಣಬ್ ಮುಖರ್ಜಿ, ಭಾರತದ 13ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು. 25 ಜುಲೈ 2012ರಿಂದ 25 ಜುಲೈ 2017ರವರೆಗೆ ಪ್ರಣಬ್ ಭಾರತದ ರಾಷ್ಟ್ರಪತಿಗಳಾಗಿದ್ದರು.
ಪತ್ನಿ ಹಾಗೂ ಮೂವರು ಮಕ್ಕಳನ್ನು ಪ್ರಣಬ್ ಅಗಲಿದ್ದಾರೆ. ಶ್ರೀಯುತರಿಗೆ 2019ರಲ್ಲಿ ಭಾರತ ರತ್ನ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಕೊರೊನಾ ವೈರಸ್ ಸೋಂಕಿತರಾಗಿದ್ದ ಪ್ರಣಬ್ ಅವರನ್ನು ದಿಲ್ಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ಇರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೋಮಾಗೆ ಜಾರಿದ್ದ ಪ್ರಣಬ್ ಮುಖರ್ಜಿ ಅವರು ವೆಂಟಿಲೇಟರ್ ನೆರವಿನೊಂದಿಗೆ ಉಸಿರಾಡುತ್ತಿದ್ದರು. ಪ್ರಣಬ್ ಅವರ ಶ್ವಾಸಕೋಶಕ್ಕೆ ಕೊರೊನಾ ಸೋಂಕು ವ್ಯಾಪಿಸಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದವು. ಕಳೆದ ಕೆಲ ದಿನಗಳಿಂದ ಅವರ ದೇಹ ಸ್ಥಿತಿ ತೀರಾ ಗಂಭೀರವಾಗಿತ್ತು.
ಆಸ್ಪತ್ರೆ ವೈದ್ಯರ ಚಿಕಿತ್ಸೆ, ಸಾವಿರಾರು ಅಭಿಮಾನಿಗಳು, ಬೆಂಬಲಿಗರ, ಹಿತೈಶಿಗಳ ಶುಭ ಹಾರೈಕೆ, ಪ್ರಾರ್ಥನೆಗಳ ನಡುವೆಯೂ ನಾವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರಣಬ್ ಮುಖರ್ಜಿ ಅವರ ಪುತ್ರ, ಮಾಜಿ ಸಂಸದ ಅಭಿಜೀತ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕಿತರಾಗಿದ್ದ ಪ್ರಣಬ್ ಅವರನ್ನು ಆಗಸ್ಟ್ 10 ರಂದು ದಿಲ್ಲಿಯ ಸೇನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಅವರು, ಆಗಸ್ಟ್ ಆರಂಭದಲ್ಲಿ ಮೆದುಳಿನ ರಕ್ತದ ಹೆಪ್ಪುಗಟ್ಟುವಿಕೆಯಿಂದ ಬಳಲಿ ಆಪರೇಷನ್‌ಗೆ ಒಳಗಾಗಿದ್ದರು. ಆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿತ್ತು. ಆದ್ರೆ, ದುರಾದೃಷ್ಟವಶಾತ್, ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುವ ಮುನ್ನವೇ ಕೊರೊನಾ ವೈರಸ್ ಸೋಂಕಿತರಾಗಿದ್ದರು.
ಪ್ರಣಬ್ ಮುಖರ್ಜಿಯವರು ಜನಿಸಿದ್ದು 1935ರ ಡಿಸೆಂಬರ್ 11ರಂದು. ಪಶ್ಚಿಮ ಬಂಗಾಳದ ಬೀರ್ ಭೂಮ್ ಜಿಲ್ಲೆ ಕಿರ್ನಾಹರ್ ಬಳಿ ಇರುವ ಮಿರಾತಿ ಎಂಬ ಹಳ್ಳಿಯಲ್ಲಿ. ಪ್ರಣಬ್ ತಂದೆ ಕಮಡ ಕಿಂಕರ್ ಮುಖರ್ಜಿ. ತಾಯಿ ರಾಜಲಕ್ಷ್ಮಿ ಮುಖರ್ಜಿ. ಅವರು 1920ರಿಂದಲೂ ಕಾಂಗ್ರೆಸ್’ನ ಸಕ್ರಿಯ ಕಾರ್ಯಕರ್ತರಾಗಿದ್ದವರು. ಎಐಸಿಸಿ ಸದಸ್ಯರೂ ಆಗಿದ್ದರು. 1952ರಿಂದ 64ರವರೆಗೆ ಪಶ್ಚಿಮ ಬಂಗಾಳ ವಿಧಾನಪರಿಷತ್ ಸದಸ್ಯರಾಗಿದ್ದರು.
Click this button or press Ctrl+G to toggle between Kannada and English