ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಣ್ಣುಆನೆ ಮರಿಗೆ ಶಿವಾನಿ ಎಂದು ನಾಮಕರಣ

1:26 AM, Wednesday, September 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Shivaniಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದಲ್ಲಿ ಜುಲೈ1 ರಂದು ಜನಿಸಿದ ಆನೆ ಮರಿಗೆ ಮಂಗಳವಾರ ನಾಮಕರಣ ಶಾಸ್ತ್ರ ನಡೆಸಲಾಗಿದ್ದು, ಶಿವಾನಿ ಎಂದು ಹೆಸರಿಡಲಾಗಿದೆ.

ದೇಗುಲದ ಆನೆ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಆನೆ ಮರಿಯ ನಾಮಕರಣ ಆ.31 ರಂದು ಅಂದರೆ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು.

ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಮಾನ್ಯ ಅವರು ಶಿವಾನಿ ಹೆಸರು ಉದ್ಘೋಶಿಸುವ ಮೂಲಕ ನಾಮಕರಣ ಮಾಡಿದರು. ಇದೇ ವೇಳೆ ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣರಿಗೆ ಸನ್ಮಾನ ನೆರವೇರಿಸಿದರು.

Shivani

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English