ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 316 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 3 ಮಂದಿ ಬಲಿಯಾಗಿದ್ದಾರೆ.
ಗುರುವಾರ ವರದಿಯಾದ 316 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 13,795 ಮಂದಿಗೆ ಕೊರೋನ ಸೋಂಕು ತಗುಲಿದೆ. ಗುರುವಾರ ಪಾಸಿಟಿವ್‌ಗೊಳಗಾದ 316 ಮಂದಿಯಲ್ಲಿ ಮಂಗಳೂರಿನ 190, ಬಂಟ್ವಾಳದ 40, ಪುತ್ತೂರಿನ 21, ಸುಳ್ಯದ 16, ಬೆಳ್ತಂಗಡಿಯ 16 ಮತ್ತು ಇತರ ಜಿಲ್ಲೆಯ 33 ಮಂದಿ ಸೇರಿದ್ದಾರೆ.
ಮಂಗಳೂರು ತಾಲೂಕಿನ 2 ಮತ್ತು ಹೊರಜಿಲ್ಲೆಯ ಒಬ್ಬರು ಸಹಿತ ಜಿಲ್ಲೆಯಲ್ಲಿ ಗುರುವಾರ 3 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 384ಕ್ಕೇರಿದೆ.
ಈವರೆಗೆ ದ.ಕ.ಜಿಲ್ಲೆಯ 1,01,272 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 13,795 ಮಂದಿಯ ವರದಿ ಪಾಸಿಟಿವ್ ಮತ್ತು 87,477 ಮಂದಿಯ ವರದಿ ನೆಗೆಟಿವ್ ಬಂದಿದೆ.
ಜಿಲ್ಲೆಯಲ್ಲಿ ಗುರುವಾರ 208 ಮಂದಿ ಕೊರೋನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅದರಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 116 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 92 ಮಂದಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10,706ಕ್ಕೇರಿದೆ. ಜಿಲ್ಲೆಯಲ್ಲಿ 2705 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿ 226 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12143ಕ್ಕೆ ಏರಿಕೆಯಾಗಿದೆ.
ಗುರುವಾರ 121 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 68 ಮಂದಿಯಲ್ಲಿ ಐಎಲ್ ಐ ಪ್ರಕರಣ ದೃಢವಾಗಿದೆ. 8 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 27 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಇನ್ನು ಹೊರರಾಜ್ಯ, ವಿದೇಶದಿಂದ ಬಂದ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ 893 ಮಂದಿಯ ವರದಿ ನೆಗೆಟಿವ್ ಬಂದಿದೆ.
118 ಮಂದಿಯಲ್ಲಿ ರೋಗ ಲಕ್ಷಣಗಳು ಪತ್ತೆಯಾಗಿದ್ದು, 108 ಮಂದಿ ಲಕ್ಷಣ ರಹಿತ ಸೋಂಕಿತರಾಗಿದ್ದಾರೆ. ಗುರುವಾರ ಮತ್ತೆ 328 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 9929 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 2115 ಮಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಗುರುವಾರ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಕೋವಿಡ್ ಸಾವಿನ ಸಂಖ್ಯೆ 106ಕ್ಕೆ ಏರಿಕೆಯಾಗಿದೆ.
ಕಾಸರಗೋಡು : ಜಿಲ್ಲೆಯಲ್ಲಿ ಗುರುವಾರ 133 ಮಂದಿಗೆ ಕೋವಿಡ್ ದೃಢಪಟ್ಟಿದೆ. 120 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 8 ಮಂದಿ ವಿದೇಶ ದಿಂದ, 5 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕಾಸರಗೋಡು ನಗರಸಭೆ 26, ಮಧೂರು ಪಂಚಾಯತ್ 13, ಕಾರಡ್ಕ ಪಂಚಾಯತ್ 2, ಚೆಮ್ನಾಡ್ 12, ಚೆಂಗಳ ಪಂಚಾಯತ್ 8, ಕುತ್ತಿಕೋಲು ಪಂಚಾಯತ್ 1, ಮೊಗ್ರಾಲ್ ಪುತ್ತೂರು 6, ಪೈವಳಿಕೆ ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಎಣ್ಮಕಜೆ ಪಂಚಾಯತ್ 3, ಮುಳಿಯಾರು ಪಂಚಾಯತ್ 5, ಮಂಜೇಶ್ವರ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 2, ಕುಂಬಳೆ ಪಂಚಾಯತ್ 5, ಕಾಞಂಗಾಡ್ ನಗರಸಭೆ 10, ಉದುಮಾ ಪಂಚಾಯತ್ 11, ಮಡಿಕೈ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 6, ಅಜಾನೂರು ಪಂಚಾಯತ್ 6, ಪಡನ್ನ ಪಂಚಾಯತ್ 2, ನೀಲೇಶ್ವರ ನಗರಸಭೆ 2, ಕಯ್ಯೂರು-ಚೀಮೇನಿ ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ದುಬೈ ಯಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್ ನ 52, ಉದುಮಾ ಪಂಚಾಯತ್ ನ 32, 51, 28, 37 ವರ್ಷದ ಪುರುಷರು, ಅಬುದಾಭಿಯಿಂದ ಬಂದಿದ್ದ ಕಾಸರಗೋಡು ನಗರಸಭೆಯ 24, ಷಾರ್ಜಾದಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನ 60 ವರ್ಷದ ಪುರುಷರಿಗೆ ಕೋವಿಡ್ ಸೋಂಕು ಖಚಿತವಾಗಿದೆ.
ಜಮ್ಮು ಕಾಶ್ಮೀರದಿಂದ ಬಂದಿದ್ದ ಕಾಞಂಗಾಡ್ ನಗರಸಭೆಯ 32, ರಾಜಸ್ತಾನದಿಂದ ಆಗಮಿಸಿದ್ದ ಕರ್ನಾಟಕ ಮೂಲ ನಿವಾಸಿಗಳಾದ 60, 41, ಕಾಸರಗೋಡು ನಗರಸಭೆಯ 30 ವರ್ಷದ ಪುರುಷರು, ಕರ್ನಾಟಕದಿಂದ ಬಂದಿದ್ದ ಮಂಜೇಶ್ವರ ಪಂಚಾಯತ್ ನ 24 ವರ್ಷದ ಪುರುಷ ಸೋಂಕಿತರು. 170 ಮಂದಿಗೆ ನೆಗೆಟಿವ್ ವರದಿ ಬಂದಿದೆ.
Click this button or press Ctrl+G to toggle between Kannada and English