ಉಡುಪಿ: ಕಾರ್ಕಳದ ಮಂಜಲ್ತಾರ್ ಎಂಬಲ್ಲಿ ಬಾಹುಬಲಿ ಸ್ವೀಟ್ ಫ್ಯಾಕ್ಟರಿ ಎಂಬ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರಕ್ಷಾ ಎಂಬ 20 ವಯಸ್ಸಿನ ಯುವತಿ ಎರಡು ದಿನಗಳಿಂದ ಕಾಣೆಯಾಗಿದ್ದಾಳೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕು ಮಾಳ ಗ್ರಾಮದ ಮಂಜಲ್ತಾರ್ ಮಾರಿಗುಡಿ ಬಳಿ ವಾಸವಿದ್ದ ಯುವತಿ ಸುರಕ್ಷಿತ ಅಸ್ಸಾಂ ಮೂಲದ ಭುವನ್ ಎಂಬ ಯುವಕನನ್ನು ಪ್ರೀತಿಸಿದ್ದಾಳೆ ಎನ್ನಲಾಗಿದ್ದು, ಆಕೆ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ತಾಯಿ ಸುನೀತಾ ನೀಡಿದ ದೂರಿನಲ್ಲಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ ಕೆಲಸಕ್ಕೆ ಹೋದವಳು ಮನೆಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಯುವತಿಗೆ ಲಾಕ್ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಮನೆಯಲ್ಲಿ ನೋಡಿದ ಹುಡುಗನೊಂದಿಗೆ ಮದುವೆಯಾಗಲು ಇಷ್ಟವಿಲ್ಲದ ಕಾರಣ ಪ್ರೀತಿಸಿದ ಸಹೋದ್ಯೋಗಿ ಯುವಕನೊಂದಿಗೆ ಹೋಗಿದ್ದೇನೆ ಎಂದು ತಂಗಿಗೆ ತಿಳಿಸಿದ್ದಾಳೆ.
ಅಕ್ಕ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿಯಾದ ಸುದ್ದಿ ಕೇಳಿ ಅಸ್ವಸ್ಥ ಗೊಂಡು ಆಘಾತಕ್ಕೊಳಗಾದ ತಂಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಇವತ್ತು ತಂಗಿಯ ಮೊಬೈಲ್ ಗೆ ಕರೆ ಮಾಡಿದ ಅಕ್ಕ ಹುಡುಕುವ ಪ್ರಯತ್ನ ಮಾಡದಂತೆ ತಂಗಿಗೆ ಹೇಳಿದ್ದಾಳೆ. ಅಕ್ಕನ ಮಾತಿನಿಂದ ಆಘಾತಗೊಂಡ ತಂಗಿ ತೀವ್ರ ಅಸ್ವಸ್ಥಳಾಗಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಇವರಿಬ್ಬರೂ ಎರಡು ದಿನಗಳ ಹಿಂದೆ ಪರಾರಿಯಾಗಿದ್ದರು. ಅಕ್ಕನ ಮಾತು ಕೇಳಿ ತಂಗಿ ಅಸ್ವಸ್ಥ ಗೊಂಡಿದ್ದಳು, ತಂಗಿಗೆ ಪಿಡ್ಸ್ ರೋಗವು ಇತ್ತೆನ್ನಲಾಗಿದೆ,
ಪಿಯುಸಿ ಓದಿರುವ ಕುಮಾರಿ ಸುರಕ್ಷಿತ 4 .8 ಅಡಿ ಎತ್ತರವಿದ್ದು ಬಿಳಿ ಮೈಬಣ್ಣ ಹೊಂದಿದ್ದಾಳೆ, ದುಂಡು ಮುಖದವಳಾಗಿದ್ದು ತುಳು, ಕನ್ನಡ ಮಾತನಾಡುತ್ತಾಳೆ. ನಾಪತ್ತೆಯಾದ ಸಂಧರ್ಭದಲ್ಲಿ ಚೂಡಿದಾರ ಧರಿಸಿದ್ದು ಹಸಿರು ಬಣ್ಣದ ಸಾಲು ಮತ್ತು ಕೆಂಪು ಬಣ್ಣದ ಪ್ಯಾಂಟ್ ಹಾಕಿದ್ದಳು ಎಂದು ಕಾರ್ಕಳ ಪೊಲೀಸ್ ರ ಪ್ರಕಟಣೆ ತಿಳಿಸಿದೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English