ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯದಲ್ಲಿ ಸೋಮವಾರದಿಂದ ಎಲ್ಲಾ ಸೇವೆಗಳು ಪ್ರಾರಂಭ

11:15 PM, Sunday, September 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kolluru  Templeಉಡುಪಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯದಲ್ಲಿ ಸೋಮವಾರದಿಂದ (ಸೆ.7) ಎಲ್ಲಾ ಸೇವೆಗಳು ಪ್ರಾರಂಭ ಗೊಳ್ಳುತ್ತವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಧಾರ್ಮಿಕ ದತ್ತಿ ಆಯುಕ್ತರು ದೇವಸ್ಥಾನದ ಎಲ್ಲಾ ಸೇವೆ ಆರಂಭಕ್ಕೆ ಸೆ.1ರಂದು ಅನುಮತಿ ನೀಡಿದ್ದು, ನಾಳೆಯಿಂದ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಸೇವೆಗಳು ಲಭ್ಯವಾಗಲಿವೆ. ಭಕ್ತರಿಗೆ ಒಳಗೆ ಪ್ರವೇಶಿಸುವಾಗ ಸ್ಯಾನಿಟೈಸರ್‌ನ ಬಳಕೆ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಸುರಕ್ಷಿತ ಅಂತರ ಕಾಪಾಡಿಕೊಂಡು ಚಂಡಿಕಾ ಹೋಮಕ್ಕೆ ಅವಕಾಶ ನೀಡಲಾಗಿದೆ. ನಿಯಮಿತ ಭಕ್ತರು ಮಾತ್ರ ಯಾಗಶಾಲೆ ಯನ್ನು ಪ್ರವೇಶಿಸಬಹುದು ಎಂದು ತಿಳಿಸಿದೆ.

ಕುಂಕುಮಾರ್ಚನೆ, ಲಾಡು ಪ್ರಸಾದ, ತುಲಾಭಾರ ಸೇವೆಯ ಜೊತೆಗೆ ಬೆಳ್ಳಿ, ಚಿನ್ನದ ರಥೋತ್ಸವ ಸೇವೆಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ನಿಗದಿತ ಸಂಖ್ಯೆಯ ಭಕ್ತರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ದೇವಸ್ಥಾನದಲ್ಲಿ ಮಧ್ಯಾಹ್ನದ ಊಟಕ್ಕೆ ಮಾತ್ರ ಅವಕಾಶವಿದ್ದು, ಸದ್ಯ ರಾತ್ರಿ ಊಟ ಇರುವುದಿಲ್ಲ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English