ಹೆಣ್ಣು ಕೃಷ್ಣ ಮೃಗದ ಮರಿ, ಚರ್ಮ, ತಲೆ ವಶಕ್ಕೆ ಪಡೆದ ಅರಣ್ಯ ಸಂಚಾರಿ‌ ದಳ

8:38 PM, Monday, September 7th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Krishna Mrugaಮಂಗಳೂರು  : ಫಾರೆಸ್ಟ್ ಸ್ಕ್ವಾಡ್ ನ(ಅರಣ್ಯ ಸಂಚಾರಿ‌ ದಳ) ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಯಾದಗಿರಿಗೆ ತೆರಳಿ ಕೃಷ್ಣ ಮೃಗದ ಚರ್ಮದ ಬೃಹತ್ ದಂಧೆಯನ್ನು ಬೇಧಿಸಿದ್ದು, ಆರು ಜನ ಆರೋಪಿಗಳ ಸಹಿತ ಸೊತ್ತುಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ.

ಈ ಬೃಹತ್ ಕಾರ್ಯಾಚರಣೆ ವೇಳೆ 20 ಕೃಷ್ಣ ಮೃಗದ ಚರ್ಮ, 2 ಕೃಷ್ಣ ಮೃಗದ ಟ್ರೋಫಿ (ತಲೆಯ ಭಾಗ), ಒಂದು ಜೀವಂತ ಹೆಣ್ಣು ಮರಿ ಹಾಗೂ ದಂಧೆಗೆ ಬಳಸಿದ ಮೂರು ಬೈಕ್ ಸೇರಿದಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರಾಟ ಮಾಡುವ ಉದ್ದೇಶದಿಂದ ಈ ಆರೋಪಿಗಳು ಸೊತ್ತುಗಳನ್ನು ಹೊಂದಿದ್ದರು ಎಂಬ ಮಾಹಿತಿ‌ ಲಭಿಸಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮಂಗಳೂರು ಫಾರೆಸ್ಟ್ ಸ್ಕ್ವಾಡ್ ನ ಸಬ್ ಇನ್ಸ್‌ಪೆಕ್ಟರ್ ಪುರುಷೋತ್ತಮ, ಹೆಡ್ ಕಾನ್ಸ್‌ಟೇಬಲ್ ಜಗನ್ನಾಥ, ಸಿಬ್ಬಂದಿಗಳಾದ ಪ್ರವೀಣ್ ಜೆ, ಉದಯ ಕುಮಾರ್, ಮಹೇಶ್, ಶಿವಾನಂದ ಜಗದೀಶ್ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English