ಕರಾವಳಿಯಾದ್ಯಂತ ಮೊಂತಿ ಹಬ್ಬ ಮತ್ತು ತೆನೆ ಹಬ್ಬ ಆಚರಣೆ

10:15 PM, Tuesday, September 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

montifestಮಂಗಳೂರು : ಕರಾವಳಿಯಾದ್ಯಂತ  ಕ್ರಿಶ್ಚಿಯನ್ ಬಾಂಧವರು ಮಂಗಳವಾರ ಮೊಂತಿ  ಹಬ್ಬ ಮತ್ತು ತೆನೆ ಹಬ್ಬವನ್ನು ಜೊತೆಯಾಗಿ ಆಚರಿಸಿದರು.

ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವಾದ ಸೆ. 8ಅನ್ನು ಮೊಂತಿ ಫೆಸ್ತ್ ಹಬ್ಬವಾಗಿ ಆಚರಿಸಲಾಗುತ್ತದೆ. ಚರ್ಚ್‌ಗಳಲ್ಲಿ ಹಬ್ಬದ ಬಲಿಪೂಜೆ ನೆರವೇರಿಸಲಾಯಿತು. ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿ ನಮಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ವಂ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಪ್ರಧಾನ ಬಲಿಪೂಜೆ ನೆರವೇರಿಸಿದರು. ರೊಸಾರಿಯೊ ಕೆಥಡ್ರಲ್‌ನ ಪ್ರಧಾನ ಧರ್ಮಗುರುಗಳಾದ ವಂ| ಅಲ್ಫೆ†ಡ್‌ ಪಿಂಟೋ, ಸಹಾಯಕ ಧರ್ಮಗುರುಗಳಾದ ವಂ| ವಿನೋದ್‌ ಲೋಬೋ, ವಂ| ವಿಕ್ಟರ್‌ ಡಿ’ಸೋಜಾ, ಗ್ಲ್ಯಾಡ್‌ಸಮ್‌ ಮೈನರ್‌ ಸೆಮಿನರಿಯ ರೆಕ್ಟರ್‌ ವಂ| ಅನಿಲ್‌ ಐವನ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ತಾಯಿ ಮೇರಿ ಮಾತೆಯ ಜನ್ಮದಿನ, ತೆನೆ ಹಬ್ಬ ಹಾಗೂ ಹೆಣ್ಮಕ್ಕಳ ದಿನವನ್ನು ಸಂಯುಕ್ತವಾಗಿ “ಮೊಂತಿಫೆಸ್ತ್’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ.
montifest
ಚರ್ಚ್‌ಗಳಲ್ಲಿ ಬೆಳಗ್ಗೆ ಹಬ್ಬದ ಬಲಿಪೂಜೆ, ಹೊಸತೆನೆಯ ಆಶೀರ್ವಚನ, ವಿತರಣೆ, ಹೂವು ಅರ್ಪಿಸಿ ಮೇರಿ ಮಾತೆಗೆ ನಮನ, ಸಿಹಿ, ತಿಂಡಿ ಹಾಗೂ ಕಬ್ಬು ವಿತರಣೆ ಕಾರ್ಯಕ್ರಮಗಳು ಜರಗಿದವು. ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು. ಬಲಿಪೂಜೆಯ ಅನಂತರ ಪೂಜಿಸಿದ ತೆನೆಯನ್ನು ಭಕ್ತರಿಗೆ ವಿತರಿಸಲಾಯಿತು. ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಸ್ಯಾನಿಟೈಸರ್‌ ಬಳಕೆ, ಥರ್ಮಲ್‌ ಸ್ಕ್ಯಾನಿಂಗ್‌ ಕಡ್ಡಾಯಗೊಳಿಸಲಾಗಿತ್ತು. ಕೊಡಿಯಾಲಬೈಲ್‌ನ ಬಿಷಪ್‌ ಹೌಸ್‌ ಚಾಪೆಲ್‌ನಲ್ಲಿ ಧರ್ಮಪ್ರಾಂತದ ಶ್ರೇಷ್ಠ ಗುರುಗಳಾದ ಮೊ| ಮ್ಯಾಕ್ಸಿಂ ನೊರೊನ್ಹಾ ಅವರು ಬಲಿಪೂಜೆ ನೆರವೇರಿಸಿದರು. ನಗರದ ಜಪ್ಪುವಿನಲ್ಲಿರುವ ಸಂತ ಅಂಥೋನಿ ಆಶ್ರಮದಲ್ಲಿ ಮೊಂತಿಹಬ್ಬ ಆಚರಿಸಲಾಯಿತು. ಆಶ್ರಮದ ನಿರ್ದೇಶಕ ವಂ| ಓನಿಲ್‌ ಡಿಸೋಜಾ, ಸಹಾಯಕ ನಿರ್ದೇಶಕರಾದ ವಂ| ಅಲ್ಬನ್‌ ರಾಡ್ರಿಗಸ್‌, ವಂ| ರೋಶನ್‌ ಡಿಸೋಜಾ ಉಪಸ್ಥಿತರಿದ್ದರು.

montifest

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English