ಕೊರೊನಾ ಸೋಂಕು : ದಕ್ಷಿಣ ಕನ್ನಡ 310, ಉಡುಪಿ 258, ಕಾಸರಗೋಡು 270

11:35 PM, Wednesday, September 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

CORONA ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 310 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15,762 ಕ್ಕೆ ಏರಿಕೆಯಾಗಿದೆ.

ಇಂದಿನ ಪ್ರಕರಣಗಳ ಪೈಕಿ  ಮಂಗಳೂರಿನಲ್ಲಿ 188, ಬಂಟ್ವಾಳದಲ್ಲಿ 27, ಪುತ್ತೂರಿನಲ್ಲಿ 25, ಸುಳ್ಯದಲ್ಲಿ 25, ಬೆಳ್ತಂಗಡಿಯಲ್ಲಿ 26 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 19 ಮಂದಿಗೆ ಪಾಸಿಟಿವ್‌ ಆಗಿದೆ.

ಬುಧವಾರ ಜಿಲ್ಲೆಯಲ್ಲಿ ಆರು ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈ ಪೈಕಿ ಐವರು ಮಂಗಳೂರಿನವರಾದರೆ ಒಬ್ಬರು ಇತರೆ ಜಿಲ್ಲೆಯವರಾಗಿದ್ದಾರೆ. ಈವರೆಗೆ 418 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇಂದು 256 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 12242 ಕ್ಕೆ ಏರಿದೆ.

ಮಂಗಳವಾರ 176 ಐಎಲ್‌ಎ, 6 ಎಸ್‌ಎಆರ್‌ಐ ಪ್ರಕರಣಗಳಾಗಿದ್ದು 82 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು 46 ಮಂದಿಗೆ ಸೋಂಕು ತಗುಲಿರುವ ಸಂಪರ್ಕದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ 258 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 13341 ಕ್ಕೆ ಏರಿಕೆಯಾಗಿದೆ.

ಇಂದಿನ ಪ್ರಕರಣಗಳ ಪೈಕಿ  ಉಡುಪಿ ತಾಲೂಕಿನಲ್ಲಿ 162, ಕುಂದಾಪುರದಲ್ಲಿ 39, ಕಾರ್ಕಳ ತಾಲ್ಲೂಕಿನಲ್ಲಿ 41, ಪ್ರಕರಣ ಪತ್ತೆಯಾಗಿದೆ. ಹಾಗೆಯೇ 16 ಮಂದಿ ಇತರೆ ಜಿಲ್ಲೆಯವರಲ್ಲಿ ಸೋಂಕು ದೃಢಪಟ್ಟಿದೆ.

ಇನ್ನು ಬುಧವಾರ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದು ಈವರೆಗೂ 122 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

171 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, 49 ಐಎಲ್‌ಐ, 7 ಸಾರಿ ಪ್ರಕರಣವಾಗಿದೆ. ಇನ್ನೂ 31 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದೆ.

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ  270 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಇಂದಿನ ಪ್ರಕರಣಗಳ ಪೈಕಿ 242 ಮಂದಿಗೆ ಪ್ರಾಥಮಿಕ  ಸಂಪರ್ಕದಿಂದ ಸೋಂಕು ತಗಲಿದೆ. 144 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇದುವರೆಗೆ 6678 ಮಂದಿ ಗೆ ಸೋಂಕು ದೃಢಪಟ್ಟಿದೆ. 4642 ಮಂದಿ ಗುಣಮುಖರಾಗಿದ್ದಾರೆ. 46 ಮಂದಿ ಮೃತಪಟ್ಟಿದ್ದಾರೆ. 6214 ಮಂದಿ ನಿಗಾದಲ್ಲಿದ್ದು, ಪೈಕಿ 1347 ಮಂದಿ ಐಸೋಲೇಷನ್ ವಾರ್ಡ್‌ನಲ್ಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English