ಮಂಗಳೂರು ರಥಬೀದಿಯಲ್ಲಿ ಉಪಟಳ ನೀಡುತ್ತಿದ್ದ ಯುವಕನ ವಿಳಾಸ ಪತ್ತೆ ಹಚ್ಚಿದ ಮೈಮುನಾ ಫೌಂಡೇಶನ್

7:07 PM, Thursday, September 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Mahesh ಮಂಗಳೂರು : ಯುವಕನೊಬ್ಬ ಮಂಗಳೂರು ರಥಬೀದಿಯಲ್ಲಿ ಮೂರು ವರ್ಷಗಳಿಂದ ಜನರಿಗೆ ಮತ್ತು ಅಂಗಡಿಗಳ ಮೇಲೆ ಕಲ್ಲೆಸೆಯುತ್ತಾ ಭೀತಿ ಸೃಷ್ಟಿಸುತ್ತಿದ್ದ  ಆತ  ಮಂಗಳೂರಿನಲ್ಲಿ ಇರುವ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದ್ದು, ಸೆ.10ರಂದು ರಾಜಸ್ಥಾನದಿಂದ ಸಂಬಂಧಿಕರು ಆಗಮಿಸಿ ಕರೆದೊಯ್ಯಲಿದ್ದಾರೆ ಎಂದು ಜನ ಸಮಾಧಾನ ಗೊಂಡಿದ್ದಾರೆ.

ಅನೇಕ ಬಾರಿ ಪೊಲೀಸರಿಗೆ ದೂರು ನೀಡಿ, ಪೊಲೀಸರು ಬಂದು ಕರೆದುಕೊಂಡು ಹೋದರೂ, ಪೆಟ್ಟು ಹೊಡೆದರೂ, ಆತ ಮತ್ತೆ ಬಂದು ಅದೇ ಜಾಗದಲ್ಲಿ ಸುತ್ತುತ್ತಾ, ಜನರು ಏನಾದರೂ ಕೊಟ್ಟರೆ ತಿನ್ನುತ್ತಾ ದೇವಸ್ಥಾನದ ಜಗಲಿಯಲ್ಲಿ ಮಲಗುತ್ತಿದ್ದ. ಜನರು ಆತನ ವೀಡಿಯೊ ಮಾಡಿ ಆಗಾಗ ಪೊಲೀಸರಿಗೆ ಕಳುಹಿಸುತ್ತಿದ್ದರು.

ಸುಮಾರು 32 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಯುವಕನ ಉಪದ್ರವದಿಂದ ಜನರು ರೋಸಿ ಹೋಗಿದ್ದರು. ಆತನ ಬಗ್ಗೆ  ಕಾರ್ನಾಡುವಿನ ಮೈಮುನಾ ಫೌಂಡೇಶನ್ ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಶನ್ ಸೆಂಟರ್‌ನ ಆಸಿಫ್ ಆಪತ್ಬಾಂಧವ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆ. 8ರಂದು ಸ್ಥಳಕ್ಕೆ ಆಗಮಿಸಿದ ಆಸಿಫ್ ಮತ್ತು ಆಲ್ತಾಬ್, ಆ ವ್ಯಕ್ತಿಯನ್ನು ಸ್ಥಳೀಯರ ನೆರವಿನಿಂದ ಅಲ್ಲೇ ಕೂದಲು ಬೋಳಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ತಮ್ಮ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದರು.

‘ರಾಜು’ ಎಂಬ ಹೆಸರಿಟ್ಟು ಎರಡು ದಿನ ತಮ್ಮ ಕೇಂದ್ರದಲ್ಲಿಟ್ಟ ಬಳಿಕ ನಿಯಮದಂತೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿತ್ತು. ಸುಮಾರು ಒಂದು ತಿಂಗಳ ಮಾನಸಿಕ, ದೈಹಿಕ ಚಿಕಿತ್ಸೆಯಿಂದ ಚೇತರಿಕೊಂಡ ರಾಜು, ತನ್ನ ಹಳೆಯದನ್ನೆಲ್ಲ ನೆನಪಿಸಿಕೊಂಡು, ಮನೆಯವರ ಬಗ್ಗೆ ಯೋಚಿಸಿ ಅಳತೊಡಗುತ್ತಾನೆ. ಕೇಂದ್ರದ ವಾರ್ಡನ್ ನೆರವಿನಿಂದ ಮೊಬೈಲ್ ಮೂಲಕ ತನ್ನ ಮನೆಗೆ ಫೋನ್ ಮಾಡುತ್ತಾನೆ.

ಆತನ ಇರುವಿಕೆ ಬಗ್ಗೆ ತಿಳಿದ ತಕ್ಷಣ, ಮನೆಯವರು ಮಂಗಳೂರಿನಲ್ಲಿರುವ ರಾಜಸ್ತಾನದ ಮಾರ್ವಾಡಿ ಸಮುದಾಯದವರಿಗೆ ಮಾಹಿತಿ ನೀಡಿದರು. ಅವರು ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಿಸಿದರು. ಅದು ರಾಜಸ್ತಾನದ ಪ್ರತಿಷ್ಠಿತ ಕುಟುಂಬ. ಈ ರಾಜುವಿನ ಅಸಲಿ ಹೆಸರು ‘ಮಹೇಶ್’. ಪದವಿ ಶಿಕ್ಷಣ ಪಡೆದು, ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ. ಯಾವುದೋ ಸಣ್ಣ ವಿಚಾರದಿಂದ ಮಾನಸಿಕ ಖಿನ್ನತೆಗೊಳಲಾಗಿದ್ದ. ಹಾಗೆ ಮೂರೂವರೆ ವರ್ಷದ ಹಿಂದೆ ಮುಂಬೈಯಿಂದ ನಾಪತ್ತೆಯಾಗಿದ್ದ. ಆತನನ್ನು ಹುಡುಕಲು ಮನೆಯವರು ಬಹಳಷ್ಟು ಪ್ರಯತ್ನ ಮಾಡಿದರೂ, ಸಲರಾಗಿರಲಿಲ್ಲ. ಆತನ ಬರುವಿಕೆಗಾಗಿ ಕಾಯುತ್ತಿದ್ದರು.

ಆತನ ಮನೆಯವರು  ಬಂದರು ಪೊಲೀಸ್ ಠಾಣೆಗೆ ಬಂದು ನಂತರ  ಮಹೇಶನ ಹಸ್ತಾಂತರ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English