ಪ್ಲಾಸ್ಮಾ ದಾನಮಾಡಿ ಕೋವಿಡ್ -19 ರೋಗಿಯ ಜೀವ ಉಳಿಸಿದ ಪೊಲೀಸ್

10:14 PM, Saturday, September 12th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ranjith Policeಪುತ್ತೂರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಡಿ ಆರ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್‌ಸ್ಟೆಬಲ್ ರಂಜಿತ್ ಕುಮಾರ್ ರೈ ಅವರು ಪ್ಲಾಸ್ಮಾ ದಾನ ಮಾಡುವ ಮೂಲಕ ಕೋವಿಡ್ -19 ರೋಗಿಯ ಜೀವ ಉಳಿಸಿದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೆಯ್ಯಾರು ಗ್ರಾಮದ ಮೂಲದ ರಂಜಿತ್ ಕುಮಾರ್, ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾದ ಬ್ರಹ್ಮವಾರ ಮೂಲದ ಪೂರ್ಣಾನಂದ ಎಂಬ ನಿವೃತ್ತ ಬ್ಯಾಂಕ್ ಅಧಿಕಾರಿ ತನ್ನ ರಕ್ತದಲ್ಲಿ ಪ್ಲಾಸ್ಮಾ ಎಣಿಕೆ ಕಡಿಮೆಯಾದ ನಂತರ ಜೀವನಕ್ಕಾಗಿ ಹೋರಾಡುತ್ತಿದ್ದಾರೆ ಎಂದು ತಿಳಿದು ರಂಜಿತ್ ತನ್ನ ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ. ರೋಗಿಯು ಈಗ ಚೇತರಿಕೆಯ ಹಾದಿಯಲ್ಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಂಜಿತ್ ತನ್ನ ಪ್ಲಾಸ್ಮಾವನ್ನು ದಾನ ಮಾಡಿದ ಜಿಲ್ಲೆಯ ಪೊಲೀಸ್ ಇಲಾಖೆ ಯ ಮೊದಲ ಪೋಲೀಸ್. ತನ್ನ ಕಾರ್ಯದ ಮೂಲಕ ಜೀವ ಉಳಿಸಿದ ತೃಪ್ತಿ ಇದೆ ಎಂದು ರಂಜಿತ್ ಅವರು ಹೇಳುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English