ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಲೆಕ್ಕಕೊಡಿ ಅಭಿಯಾನದೊಂದಿಗೆ ರಾಜ್ಯ ಸರಕಾರ ಕೋವಿಡ್ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ವನ್ನು ಜನರಿಗೆ ತಿಳಿಸುವ ಅಭಿಯಾನ ವನ್ನು ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ರಾಜ್ಯಕ್ಕೆ ಜಿ.ಎಸ್ ಟಿ ಮೂಲಕ ಬರಬೇಕಾದ ಪಾಲು ಬಂದಿಲ್ಲ, ನೆರೆ ಪರಿಹಾರ ವಾಗಿ ಕಳೆದ ವರ್ಷ ಬರಬೇಕಾದ 50 ಸಾವಿರ ಕೋಟಿ ರೂ ನಷ್ಟ ಆಗಿತ್ತು. ಕೇಂದ್ರ ಸರಕಾರದಿಂದ ಕೇವಲ 1800 ಕೋಟಿ ನೆರವು ಮಾತ್ರ ಬಂದಿದೆ. ಈ ಬಾರಿ 10 ಸಾವಿರ ಕೋಟಿ ರೂ ನಷ್ಟ ಆಗಿದೆ.ಆದರೆ ಸರಕಾರ ಕೇವಲ 600ಕೋಟಿ ರೂ ನಷ್ಟ ಆಗಿದೆ ಎಂದು ಅಂದಾಜಿಸಿದ್ದಾರೆ. ಈ ಪರಿಹಾರ ಸಂತ್ರಸ್ತರಿಗೆ ದೊರೆತಿಲ್ಲ. ಸರಕಾರ ಈ ಬಗ್ಗೆ ಯಾವೂದೇ ಕ್ರಮ ಕೈ ಗೊಂಡಿಲ್ಲ. ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನು ತಿದ್ದುಪಡಿ ಮೊದಲಾದ ವಿಷಯಗಳ ಬಗ್ಗೆ ಈ ಸೆ.21ರಲ್ಲಿ ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್ ಸದನದಲ್ಲಿ ಚರ್ಚಿಸಲಿದೆ ಎಂದು ಸಲೀಂ ಅಹಮ್ಮದ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪರಿಣಾಮವಾಗಿ ಡಿ.ಜೆ.ಹಳ್ಳಿ ಪ್ರಕರಣ, ಡಗ್ಸ್ ಹಗರಣಗಳು ಮೂಲಕ ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದರು.
ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ನಡೆಯುತ್ತಿದೆ ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕೋರ್ ಕಮಿಟಿ ರಚಿಸಲಾಗುವುದು. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದಲ್ಲಿ ಯುವ ಜನರ ಸಂಘಟನೆ ನಡೆಯುತ್ತಿದೆ ಎಂದು ಸಲೀಂ ತಿಳಿಸಿದ್ದಾರೆ..
ಮಂಗಳೂರಿನಲ್ಲಿದ್ದ ಆದಾಯ ತೆರಿಗೆ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರ ಮಾಡಿರುವ ನಿರ್ಧಾರವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವ, ಐವನ್ ಡಿ ಸೋಜ, ಮಂಜುನಾಥ ಭಂಡಾರಿ, ಮಿಥುನ್ ರೈ, ಕವಿತಾ ಸನಿಲ್, ಸದಾಶಿವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English