ಮಾಲಿಕನ ಸಾವಿನ ಬಳಿಕ ಅನ್ನ ನೀರು ಬಿಟ್ಟ ಸ್ವಾನ

12:15 PM, Monday, September 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kaddiಬೆಳಗಾವಿ : ಇಲ್ಲಿನ  ಶಂಕರಪ್ಪ ಮಡಿವಾಳ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾಲಿಕನ ಸಾವಿನಿಂದ ಮನೆಯಲ್ಲಿ ಸಾಕಿದ್ದ ಶ್ವಾನ, ಕೋತಿ ಕಳೆದ 8 ದಿನಗಳಿಂದ ಅನ್ನ, ನೀರು ಬಿಟ್ಟು ಕುಳಿತಿವೆ. ಮಾಲಿಕನ ಮರಣದಿಂದ ಮೂಕ ಪ್ರಾಣಿಗಳು ಕಣ್ಣೀರಿಡುತ್ತಿವೆ.

ಮಾಲಿಕನ ಸಮಾಧಿ ಬಳಿ ದಿನಾ ಹೋಗಿ ಬರುತ್ತಿವೆ. ಊಟವನ್ನೇ ಮಾಡದೇ ಸುಮ್ಮನೆ ಕುಳಿತು ಬಿಡುತ್ತವೆ. ಅವರು ತೀರಿ ಹೋದಾಗಿನಿಂದಲೂ ಸಹ ಈ ಶ್ವಾನ ತುತ್ತು ಕೂಳು ಸಹ ತಿನ್ನದೆ ಹೀಗೆ ಮೂಕ ವೇದನೆ ಅನುಭವಿಸುತ್ತಿದೆ. ತನ್ನ ಯಜಮಾನ ಬರ್ತಾನೆ ಅಂತ ಕಾದು ಕುಳಿತಿದೆ.

ಈ ಶ್ವಾನಕ್ಕೆ ಶಂಕರಪ್ಪ ಪ್ರೀತಿಯಿಂದ ಕಡ್ಡಿ ಎಂದು ನಾಮಕರಣ ಮಾಡಿದ್ದರು. ತಾನು ಮಲಗುವ ಎಸಿ ರೂಮಿನೊಳಗೂ ಸಹ ನಾಯಿಯನ್ನು ಬಿಟ್ಟುಕೊಳ್ಳುತ್ತಿದ್ದ ಶಂಕರಪ್ಪ ತನ್ನ ಸ್ನೇಹಿತನಿಗಿಂತಲೂ ಸಹ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರಂತೆ. ಹೀಗಾಗಿ ನಾಯಿ ಕಡ್ಡಿ ಮತ್ತು ಶಂಕರಪ್ಪ ನಡುವೆ ಅನ್ಯೋನ್ಯ ಸಂಬಂಧ ಬೆಳೆದುಬಿಟ್ಟಿತ್ತು. ಹೀಗಾಗಿ ಅವರು ಕಣ್ಮುಚ್ಚಿದ ಬಳಿಕ ಕಡ್ಡಿ ಊಟವನ್ನೂ ಸಹ ಮಾಡದೇ ಮೂಕ ವೇದನೆ ಅನುಭವಿಸ್ತಿದೆ ಎನ್ನುತ್ತಾರೆ ಸ್ಥಳೀಯರು.

shankarappa

Koti

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English