ಸರಕಾರಿ ಹೊದಿಕೆಗಳನ್ನು ಕದ್ದೊಯ್ದು ಮಹಿಳೆಯೊಂದಿಗೆ ಅಕ್ರಮ ಸಂಬಂಧ, ಪತ್ನಿಯಿಂದ ದೂರು

1:28 AM, Tuesday, September 15th, 2020
Share
1 Star2 Stars3 Stars4 Stars5 Stars
(No Ratings Yet)
Loading...

Koragappa poojaryಮಂಗಳೂರು: ಸರಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಪತಿಯ ಮೇಲೆ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ನಡೆದಿದೆ .

ಪಡು ಪಣಂಬೂರು ಗ್ರಾಮದ ನಿವಾಸಿ ಸರಕಾರಿ ಹಾಸ್ಟೆಲ್ನಲ್ಲಿ ಅಡುಗೆ ಕೆಲಸದಲ್ಲಿರುವ ಕೊರಗಪ್ಪ ಪೂಜಾರಿಯ ಅಕ್ರಮ ಸಂಬಂಧದ ಬಗ್ಗೆ ಪತ್ನಿ ತೇಜಾಕ್ಷಿ ಎಂಬುವರು ದೂರು ದಾಖಲಿಸಿದ್ದಾರೆ.

ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಈತ, ಸರ್ಕಾರ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡಿದ್ದಾನೆ. ಕೆಲವನ್ನು ಮಾರಾಟ ಮಾಡಿದ್ದು, ಮನೆಗೂ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೆ ಆತನ‌ ವಿರುದ್ಧ ಕಿರುಕುಳ, ಜೀವಬೆದರಿಕೆ ದೂರನ್ನೂ ಪತ್ನಿ ದಾಖಲಿಸಿದ್ದಾರೆ.

ಪತಿಯು ಇನ್ನೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕೆಲಸ ಮಾಡುವ ಹಾಸ್ಟೆಲ್‌ಗೆ ಆ ಮಹಿಳೆ ತಹಶೀಲ್ದಾರ್ ಸೋಗಿನಲ್ಲಿ ತೆರಳಿ, ಅಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆಕೆ ದೂರಿನಲ್ಲಿ‌‌ ಆರೋಪಿಸಿದ್ದಾರೆ. ಅಲ್ಲದೆ ಹಾಸ್ಟೆಲ್ಗೆ ತರುವ ಅಡುಗೆ ಸಾಮಗ್ರಿಗಳನ್ನೂ ಕೂಡ ಕದ್ದು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಕೊಲೆ ಬೆದರಿಕೆ, ಅನೈತಿಕ ಸಂಬಂಧ, ಸರ್ಕಾರಿ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.‌

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English