ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ತಕ್ಷಣವೇ ಬಂಧಿಸಲು ಎಬಿವಿಪಿಯಿಂದ ಸಹಿಸಂಗ್ರಹ ಅಭಿಯಾನ

11:11 PM, Tuesday, September 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Abvp ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಶಾಖೆಯ ವತಿಯಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಸಹಿಸಂಗ್ರಹ ಅಭಿಯಾನವನ್ನು ಮಂಗಳವಾರ ನಗರದ ಪುರಭವನದ ಎದುರು ಹಮ್ಮಿಕೊಳ್ಳಲಾಗಿತ್ತು,

ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀ ಡಾ. ರಾಜಶೇಖರ್ ಹೆಬ್ಬಾರ್ ರವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ನಾಗರಿಕರು ಸ್ವತಃ ಸಹಿ ಮಾಡುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸಿದರು.

ನಗರ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣನವರ್, ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಶಾನ್ ಆಳ್ವ, ನಗರ ಸಹ ಕಾರ್ಯದರ್ಶಿ ಶ್ರೇಯಸ್, ಜಿತೇಶ್, ವಿಕಾಸ್ ಕಾಟಿಪಳ್ಳ, ಧನ್ಯಾ ರೈ, ಹರ್ಷಿತ್, ರಜತ್ ಕಾಮತ್, ಹೃತೀಕ್ ಕೊಲ್ಯ ಇತರರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English