ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನಾಮಕರಣ ಮಾಡಲು ಮನವಿ

11:25 PM, Tuesday, September 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Biruver Kudlaಮಂಗಳೂರು  : ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ವತಿಯಿಂದ  ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ದಿವಾಕರ್ ಅವರಿಗೆ ಮತ್ತು ಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಅವರಿಗೆ  ಮನವಿ ನೀಡಲಾಯಿತು.

ಮನವಿಯನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಅವರಿಗೆ ಈ ಮೊದಲೇ ಬಗ್ಗೆ 2018 ಕ್ಕೆ ಮನವಿಯನ್ನು ನೀಡಿದ್ದೇವೆ. ಈಗ ಮತ್ತೊಮ್ಮೆ ಮರು ಮನವಿಯನ್ನು ಶಾಸಕರಿಗೆ ನಮ್ಮ ಸಂಸ್ಥೆಯ ವತಿಯಿಂದ ನೀಡಿದ್ದೇವೆ ಎಂದು ಬಿರುವೆರ್ ಕುಡ್ಲ ಸಮಿತಿಯ ಉದಯ ಪೂಜಾರಿ ಹೇಳಿದರು.

ನಮ್ಮ ಮನವಿಗೆ ಈಗಾಗಲೇ ಶಾಸಕರು ಮತ್ತು ಮಹಾಪೌರರು ಸ್ಪಂದನೆ ನೀಡಿದ್ದು ಮುಂದಿನ ದಿನಗಳಲ್ಲಿ ಲೇಡಿಹಿಲ್ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು”ಗಳ ಹೆಸರನ್ನು ನಾಮಕಾರಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English