ಮಂಗಳೂರು: ಮಾಜಿ ಸಚಿವ ರಮಾನಾಥ ರೈಯವರು ಎರಡು ಸಾವಿರಕ್ಕೆ ಮರಳು ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದನ್ನು ಟೀಕಿಸಿದ್ದರು ಆದರೆ ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣ ಹೇಳಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಮರಳು ಮಾಫಿಯಾ ನಡೆಯುತ್ತಿತ್ತು ನಾವು 2 ಸಾವಿರ ರೂ.ಗೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದರು. ಇದಕ್ಕೆ ಪರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ ನಿಲ್ಲಬೇಕೆಂಬ ಸದುದ್ದೇಶದಿಂದ ಅವರು ಯುನಿಟ್ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ಅವರು ಹೇಳಿದರು.
ರಮಾನಾಥ ರೈಯವರೊಂದಿಗೆ ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡವರೇ ಇದ್ದರು. ರಮಾನಾಥ ರೈಯರ ಅಂದು ಹೇಳಿದನ್ನು ಕಂಡಾಗ ಬಹುಶಃ ಅವರ ಕಾಲದಲ್ಲಿದ್ದಂತೆ ಮರಳಿಗೆ 15-20 ಸಾವಿರ ರೂ. ಇರಲಿ ಎಂದು ಅಪೇಕ್ಷೆ ಎಂದೆನಿಸುತ್ತದೆ ಎಂದು ತಿರುಗೇಟು ನೀಡಿದರು.
ಈ ಮಾಫಿಯಾಗಳು ಹೊಸ ಮರಳು ನೀತಿ ಜಾರಿಗೆ ಬಾರದಂತೆ ಪಿತೂರಿ ಮಾಡುವ ವ್ಯವಸ್ಥೆ ಇದೆ. ಅದರ ಬಗ್ಗೆ ದ.ಕ.ಜಿಲ್ಲಾ ಬಿಜೆಪಿ ಪಕ್ಷ ಸಂಸದರು, ಶಾಸಕರುಗಳ ನೇತೃತ್ವದಲ್ಲಿ ಹೋರಾಟ ನಡೆಸಿ ಉತ್ತಮವಾದ ನೂತನ ಮರಳು ನೀತಿಯನ್ನು ಜಾರಿಗೆ ತರಲಿದೆ ಎಂದು ಹೇಳಿದರು.
ಡಿಸಿಯವರು 1,200 ರೂ. ನಲ್ಲಿ ನೇರವಾಗಿ ಟೆಂಡರ್ ಮೂಲಕ ಖರೀದಿಸಬಹುದು ಎಂದು ಹೇಳಿದರೆ, ನೀವು 2 ಸಾವಿರ ರೂ. ಎಂದು ಹೇಳುತ್ತಿದ್ದೀರಿ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ರಾಧಾಕೃಷ್ಣನ್ ಅವರು ಪ್ರತಿಕ್ರಿಯಿಸಿ, ಮರಳು ಸಾಗಾಟದ ಲಾರಿ ವೆಚ್ಚ, ಕೆಲಸಗಾರರ ಸಂಬಳ ಸೇರಿ ಇಷ್ಟು ವೆಚ್ಚವಾಗುತ್ತದೆ. ಈ ಬಗ್ಗೆ ತಾಲೂಕು ತಾಲೂಕಿನಲ್ಲಿ ಬ್ಲಾಕ್ ಮಾಡಲಾಗುತ್ತದೆ. ಇದು ಅಂತಿಮಮವೂ ಅಲ್ಲ. ಬೇರೆ ಇನ್ನಷ್ಟು ನಿಯಮಾವಳಿಗಳು ಸೇರಲಿರುತ್ತದೆ ಎಂದು ಹೇಳಿದರು.
Click this button or press Ctrl+G to toggle between Kannada and English