ಸಿಂಡಿಕೇಟ್ ಸರ್ಕಲ್ ಬಳಿ ಎಂಟು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿ

11:16 PM, Monday, September 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Manipal Building ಉಡುಪಿ  : ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಎಂಟು ಅಂತಸ್ತಿನ ಕಟ್ಟಡದ ತಡೆಗೋಡೆ ಕುಸಿಯುತ್ತಿದ್ದು ಕಟ್ಟಡ ಕುಸಿಯುವ ಹಂತದಲ್ಲಿದೆ.

ಎಸಿ, ಪೌರಾಯುಕ್ತ, ತಹಶಿಲ್ದಾರ್, ಜಿ.ಪಂ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಕಟ್ಟಡದ ತಡೆಗೋಡೆ ಕುಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕಟ್ಟದಲ್ಲಿರುವ ಜನರನ್ನು ಸ್ಥಳಾಂತರಿಸುವ ಕೆಲಸ ನೆಡೆಯುತ್ತಿದೆ ಸದ್ಯ ಕಟ್ಟಡದ ತಳಭಾಗದಲ್ಲಿ ಮೂರು ಅಂಗಡಿಗಳಿದ್ದು ಅವುಗಳನ್ನು ಮುಚ್ಚಲಾಗಿದೆ.

ಉಡುಪಿಯಿಂದ ಮಣಿಪಾಲಕ್ಕೆ ಬರುವ ವಾಹನ ಸಂಚಾರದ ರಸ್ತೆಯನ್ನು ಬಂದ್ ಮಾಡಲಾಗಿದ್ದು ಇನ್ನೊಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Manipal Building

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English