ಅದೇನೊ ಮೋಡಿ ಮಾಡಿರುವೆ !
1:40 PM, Tuesday, September 22nd, 2020
Loading...
ನೀನು ಅದೇನೊ ಮೋಡಿ ಮಾಡಿರುವೆ !
ಈ ಹೃದಯಕೆ; ಅದಕ್ಕೆ ನಿನ್ನದೆ ಕನವರಿಕೆ
ಬೀಸುವ ಗಾಳಿಯಲಿ ನಿನ್ನ ಒಲವಿನ ಬೆರುಕೆ
ಈ ತಣ್ಣನೆಯ ತಂಪು ಮುತ್ತಿಟ್ಟಂತೆ;
ಭಾಸವಾಗುತ್ತಿದೆ ಹೂ ಮನಕೆ
ನೀನು ಅದೇನೊ ಮೋಡಿ ಮಾಡಿರುವೆ !
ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ಕುಣಿತಿರುವೆ
ಮನದಲಿ ಚುಕ್ಕಿಗಳಿಟ್ಟು; ಚಿತ್ರ ಬಿಡಿಸಿರುವೆ
ಚೈತ್ರಕ್ಕೆ ಸೂತ್ರ ಕಟ್ಟಿ; ಭಾನಲ್ಲಿ ತೇಲಿಬಿಟ್ಟು
ಆಡಿ ನಲಿದಿರುವೆ
ನೀನು ಅದೇನೊ ಮೋಡಿ ಮಾಡಿರುವೆ !
ನನ್ನ ಒನಪು ವಯ್ಯಾರ ಶೃಂಗಾರಕೆ
ಕಾರಣ ನೀನೆ ಆಗಿರುವೆ
ನನ್ನ ಚೆಲುವನ್ನು ನಿನ್ನ ಕಿರುನಗೆಯ,
ಕನ್ನಡಿಯಲ್ಲಿ ಕಂಡು ನಾಚಿರುವೆ
ನೀನು ಅದೇನೊ ಮೋಡಿ ಮಾಡಿರುವೆ !
ನನ್ನ ಬಂಧಿಸಲು ಬಳಸಿದ ಎಲ್ಲಾ
ಬೀಗಗಳನು; ಮುರಿದು ಬಂದಿರುವೆ
ಪ್ರೇಮ ಪ್ರವಾಹವಾಗಿ ಹರಿಯುತ್ತಿರುವಾಗ
ಗಡಿರೇಖೆಗಳ ಮೀರಿ ಬಂದಿರುವೆ
ಪರಶುರಾಮ್ ಎಸ್ ನಾಗೂರು
ಶಕ್ತಿನಗರ 9901279334