ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುತ್ತದೆ ಎಂದು ತಿಳಿದುಕೊಳ್ಳಿ

7:00 AM, Friday, September 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

south Indianಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುತ್ತದೆ,
ಕಂಕಣಬಲ ಕೂಡಿ ಬರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ.

ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆಯುವರು. ಕೆಲವರು ವಿವಾಹದ ಬಯಕೆಯಿಂದ ಕಾದು ಕುಳಿತಿರುತ್ತಾರೆ.

ಜನ್ಮ ಕುಂಡಲಿಯಲ್ಲಿ 7ನೇ ಸ್ಥಾನವು ವಿವಾಹದ ಸ್ಥಾನ ಎಂದು ಪರಿಗಣಿಸಲಾಗಿದೆ.

ದ್ವಿತೀಯ ಮನೆಯ ಕುಟುಂಬ ಸ್ಥಾನವಾಗಿರುತ್ತದೆ.

ಚತುರ್ಥ ಸ್ಥಾನ ಸುಖ ಸ್ಥಾನವಾಗಿದೆ.

ನವಮ ಭಾಗ್ಯದ ಸ್ಥಾನ ಎಂದು ಪರಿಗಣಿಸಲಾಗಿದೆ.

ಹನ್ನೊಂದುನೇ ಸ್ಥಾನ ಲಾಭ ಸ್ಥಾನವಾಗಿರುತ್ತದೆ.

ಸಪ್ತಮ ಈ ಎಲ್ಲ ಮನೆಗಳಲ್ಲಿರುವ ಗ್ರಹ ನೋಡುವುದು, ಅದರ ಅಧಿಪತಿಗಳು ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುವುದು.

ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ, ರವಿ ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ, ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸುತ್ತದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿಯಾಗುತ್ತದೆ. ಸಂಬಂಧದಲ್ಲಿ ವಿವಾಹವಾಗುವುದು. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗವು ಸಹ ಬರಬಹುದು.

ಚಂದ್ರ : ಬಲಿಷ್ಠನಾಗಿದ್ದರೆ ಒಳ್ಳೆಯ ಮನಸ್ಸು ಹಾಗೂ ಸುಂದರಿಯಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ. ಯುವತಿಯ ಪತಿ ಮೃದು ಸ್ವಭಾವ ಇರುವರು. ಕ್ಷೀಣ ಚಂದ್ರನಿದ್ದರೆ ವಿಧುರ. ಮಾತೃ ಸಂಬಂಧದಲ್ಲಿ ವಿವಾಹವಾಗುವುದು.

ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಧೈರ್ಯಶಾಲಿ ಪತ್ನಿ. ಒಂದಕ್ಕಿಂತ ಹೆಚ್ಚು ವಿವಾಹ ಯೋಗ. ಸ್ತ್ರೀಯರಿಂದ ತಿರಸ್ಕಾರ ಮೂಡುತ್ತದೆ. ವಿವಾಹಕ್ಕೆ ಅನೇಕ ವಿಘ್ನಗಳು ಎದುರಾಗುತ್ತವೆ. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿರುವುದಿಲ್ಲ.

ಬುಧ : ಉತ್ತಮ ಪಾಂಡಿತ್ಯ. ಗಂಡನಿಗೆ ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯರಾಗಿರುತ್ತಾರೆ. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದಾಗಿದೆ. ಪಾಪಗ್ರಹದ ಜತೆ ಇದ್ದರೆ ಪತ್ನಿಗೆ ತೊಂದರೆ, ಪತ್ನಿ ಕೆಟ್ಟ ಆಲೋಚನೆಗಳು
ಮಾಡುವಳು.

ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ ಪಡೆಯಬಹುದು. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ, ಇಲ್ಲವೆ ಇತರರಿಗೆ ಮಾರ್ಗದರ್ಶಕಳ. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ.

ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮವಾಗಿದೆ. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.

ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ತಿರಸ್ಕಾರ, ಸ್ತ್ರೀ ಸಂಗ. ವಿವಾಹಕ್ಕೆ ವಿಳಂಬ.

ರಾಹು : ವಿಧುರ, ಪ್ರಿಯ, ಅಸುಖಿ, ಪತ್ನಿ ಅತಿ ತುಂಬಾ ವಿದ್ಯಾವಂತೆ. ಅನ್ಯ ಜಾತಿ ಪತ್ನಿ ಸಿಗುವ ಭಾಗ್ಯ.

9) ಕೇತು : ಪರಜಾತಿ ಜಾತಿ ವಿವಾಹ. ವಿವಾಹದಲ್ಲಿ ದುರಂತ .ಸ್ತ್ರೀಯರ ವ್ಯಾಮೋಹ ಹೆಚ್ಚು. ವಿವಾಹ ವಿಳಂಬವಾಗುತ್ತದೆ. ಮಾನ ಹಾನಿ ಸಂಭವ. ಸಂಗಾತಿಯೊಂದಿಗೆ ಮನಸ್ತಾಪ ಮೂಡುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English