ಸಾರಿಗೆ ನೌಕರರಿಗೆ ಇಪ್ಪತ್ತೆರಡು ತಿಂಗಳು ಗತಿಸುತ್ತ ಬಂದರೂ ನಿವೃತ್ತಿ ಮೊತ್ತ ಸಿಕ್ಕಿಲ್ಲ

5:45 PM, Sunday, September 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ksrtc ಧಾರವಾಡ : ನಿವೃತ್ತಿಯಾಗಿ ಇಪ್ಪತ್ತೆರಡು ತಿಂಗಳು ಗತಿಸುತ್ತ ಬಂದರೂ ನಿವೃತ್ತಿ ಮೊತ್ತ ದೊರಕಿರುವುದಿಲ್ಲ. ಈ ಕೂಡಲೇಸರಕಾರ ಮಧ್ಯಸ್ಥಿಕೆ ವಹಿಸಿ ಸರಕಾರದಿಂದ ನಿಧಿ ಬಿಡುಗಡೆ ಗೊಳಿಸಿ, ನಿವೃತ್ತ ಸಾರಿಗೆ ನೌಕರರ ಪ್ರಾಣ ಉಳಿಸಿ, ಸಂಧ್ಯಾಕಾಲದ ಬದುಕಿಗೆಒಳ್ಳೆಯ ವಾತಾವರಣ ಕಲ್ಪಿಸಿಕೊಡಿ ಎಂದು ಕ.ರಾ.ರ.ಸಾ.ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಲ್ಲಿಸಿದೆ.

ಸರಕಾರಿ ಸಾರಿಗೆ ಎಂಬ ಸರಕಾರದ ಪರಿಕಲ್ಪನೆಯನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಒದಗಿಸುವುದು ಸಾರಿಗೆ ನೌಕರರು. ತಮ್ಮಜೀವನದ ಮುಕ್ಕಾಲು ಭಾಗ ದಿನನಿತ್ಯ ಸಂಚಾರದಲ್ಲಿದ್ದು ತಮ್ಮ ಕಷ್ಟಗಳನ್ನು ತೋರ್ಪಡಿಸದೇ, ಸರಕಾರ ಹೊರ ತರುವಎಲ್ಲ ಯೋಜನೆಗಳನ್ನು ಅಬ್ಯುಧೇಯಗೊಳಿಸುವುದೇ ಸಾರಿಗೆ ನೌಕರ. ಅಂತಹ ನೌಕರರನ್ನು ಯಾವ ತೊಂದರೆ, ಕೊರತೆ ಬಾರದಂತೆ ನೋಡಿಕೊಳ್ಳುವುದು ಸರಕಾರದ ಧರ್ಮ. ಆದರೆ ಈ ವರೆಗಿನ ಯಾವ ಸರಕಾರಗಳೂ ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಿಲ್ಲ. ಸಾರಿಗೆ ನೌಕರರಿಗೆ ಎಲ್ಲರಿಗಿಂತ ಶೇ. 50 ರಷ್ಟು ಕಡಿಮೆ ವೇತನ. ಇತರೇ ಸರಕಾರಿ ಸೌಲಭ್ಯಗಳಿಲ್ಲ, ಸರಕಾರಿ ಪಿಂಚಣಿ ಇಲ್ಲ. ನಿವೃತ್ತಿಯಾದ ನೌಕರರು ತಮಗೆ ಬರಬೇಕಿರುವ ನಿವೃತ್ತಿ ನಂತರದ ಮೊತ್ತಗಳನ್ನು ಪಡೆದುಕೊಳ್ಳಲು ಪರದಾಡುತ್ತಿದ್ದಾರೆ.ಆದರೂ ಸರಕಾರ ಕಣ್ಣು ತೆರೆಯುತ್ತಿಲ್ಲ. ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾರಿಗೆ ನೌಕರರು ಬೇಕು ಆದರೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದರೆ ಸರಕಾರಕೆ ಅಸಡ್ಯ. ಸಾರಿಗೆ ನೌಕರರ ಪಾಡು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಮೂವತ್ತರಿಂದ ನಲವತ್ತು ವರ್ಷ ಬಿಡುವಿಲ್ಲದ ಕೆಲಸ ನಿರ್ವಹಿಸಿ ನಿವೃತ್ತಿ ಆದ ತಕ್ಷಣ ವೇತನ ಸ್ಥಗಿತಗೊಳ್ಳುತ್ತದೆ. ಮೊದಲೇ ಪಿಂಚಣಿ ಇಲ್ಲ, ನಿವೃತ್ತಿ ನಂತರದ ಗ್ರ್ಯಾಚುಟಿ, ರಜಾ ನಗದೀಕರಣ ಮೊತ್ತಗಳಿಂದಾದರೂ ಜೀವನ ಸಾಗಿಸಬಹುದೆಂದುಕೊಂಡರೆ ಅವೂ ಸಹ ಎರಡು ವರ್ಷದಿಂದ ಪಾವತಿ ಆಗಿಲ್ಲ. ಹಾಗಾದರೆ ನಿವೃತ್ತ ಆದ ಸಾರಿಗೆ ನೌಕರ ಹೇಗೆ ಜೀವನ ಸಾಗಿಸಬೇಕು. ಒಟ್ಟಿನಲ್ಲಿ ನಿವೃತ್ತ ಸಾರಿಗೆ ನೌಕರರ ಗೋಳು, ನೌಕರಿ ಮೇಲಿದ್ದಾಗಲೂ ಕಷ್ಟ, ನಿವೃತ್ತಿ ಆದ ಮೇಲೂ ಕಷ್ಟ, ಬೆಂಕಿಯಿಂದ ಬಾಣಲೆಗೆ ಎಂಬಂತಾಗಿದೆ.

ಎಲ್ಲ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ,ಸಿಬ್ಬಂದಿ ನಿವೃತ್ತಿ ಆಗುವ ಮುಂಚೆ ಅವರಿಗೆ ಬರಬೇಕಿರುವ ಎಲ್ಲ ಮೊತ್ತಗಳನ್ನು ಲೆಕ್ಕಾಚಾರ ಮಾಡಿಟ್ಟುಕೊಂಡು ಅವರ ನಿವೃತ್ತಿ ದಿನ ಪಾವತಿಸುತ್ತಾರೆ. ಆದರೆ ಸಾರಿಗೆ ನಿಗಮಗಳಲ್ಲಿ ವರ್ಷ, ಎರಡು ವರ್ಷ ಅಲೆದಾಡಬೇಕು. ಸಿಕ್ಕಿರುವ ಮಾಹಿತಿ ಪ್ರಕಾರ ಕೆ.ಎಸ್.ಆರ್.ಟಿ.ಸಿ /ಎನ್.ಈ.ಕೆ.ಆರ್.ಟಿ.ಸಿ./ ಬಿ.ಎಂ.ಟಿ.ಸಿ. ಯಲ್ಲಿ ಸುಮಾರು ಐದಾರು ತಿಂಗಳಿಂದ ವಾಯವ್ಯ ನಿಗಮದಲ್ಲಿ 22 ತಿಂಗಳಿಂದ ಈಚೆಗೆ ನಿವೃತ್ತಿ ಆಗಿರುವ ಯಾರಿಗೂ ಗ್ರ್ಯಾಚುಟಿ, ಲೀವ್ ಎನಕ್ಯಾಶಮೆಂಟ ಹಾಗೂ ಇತರೇ ನಿವೃತ್ತಿ ಮೊತ್ತಗಳು ಸಿಕ್ಕಿರುವುದಿಲ್ಲ. ಅವರೆಲ್ಲರೂ ಜೀವನ ಸಾಗಿಸುವುದು ದುಸ್ತರವಾಗಿದೆ. ಇವುಗಳನ್ನು ಪಡೆಯಲು ದಿನನಿತ್ಯ ವಿಭಾಗೀಯ ಕಛೇರಿಗಳಿಗೆ, ಕೇಂದ್ರ ಕಛೇರಿಗಳಿಗೆ ಅಲೆದಾಡುತ್ತಿದ್ದಾರೆ. ಪ್ರಯೋಜನವಾಗಿಲ್ಲ. ಕೋವಿಡ್-19 ಈ ಸಂದರ್ಭದಲ್ಲಿ ಸಿಬ್ಬಂದಿಗಳ ವೇತನವನ್ನು ಸರಕಾರವೇ ಭರಿಸುತ್ತಿದೆ. ಮುಂದಿನ ದಿವಸಗಳು ಸಾರಿಗೆ ಆದಾಯ ಸುಧಾರಿಸಿದಲ್ಲಿ ಅಥವಾ ಸರಕಾರ ಅನುದಾನ ನೀಡಿದಲ್ಲಿ ನಿವೃತ್ತಿ ನೌಕರರ ಬಾಕಿ ಪಾವತಿ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.

ನಿವೃತ್ತ ಸಾರಿಗೆ ನೌಕರರಿಗೆ ನಿವೃತ್ತಿ ಮೊತ್ತಗಳು ಪಾವತಿಯಾಗದಿರುವುದು (ಗೋಳು) ಬಹುಷ: ತಮ್ಮ ಗಮನಕ್ಕೆ ಬಂದಿಲ್ಲವೆಂದು ಕಾಣಿಸುತ್ತದೆ. ನಾಲ್ಕೂ ನಿಗಮದ ಸಾವಿರಾರು ನೌಕರರು ನಿವೃತ್ತಿಯ ಮೊತ್ತ ಬಾರದೇ ಕಷ್ಟದಲ್ಲಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದುರ್ಮರಣಕ್ಕೆ ತುತ್ತಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ತಮಗೂ ಹಾಗೂ ಸರಕಾರಕ್ಕೆಕೆಟ್ಟ ಹೆಸರು. ಆದ್ದರಿಂದ ಈ ಕೂಡಲೇ ತಾವು ಸಾರಿಗೆ ನಿವೃತ್ತಿದಾರರರಿಗೆ ಸಂಬಂದಪಟ್ಟ ಗ್ರ್ಯಾಚುಟಿ, ಲೀವ್ ಎನಕ್ಯಾಶ್ಮೆಂಟ್ ಹಾಗೂ ಇತರೇ ನಿವೃತ್ತಿ ಮೊತ್ತಗಳನ್ನು ಸರಕಾರದಿಂದ ಬಿಡುಗಡೆಗೊಳಿಸಬೇಕು.

ಈಗಾಗಲೇ ಹಾಲಿ ನೌಕರರಿಗೆ ಸರಕಾರದಿಂದ ವೇತನ ಪಾವತಿಸುತ್ತಿರುವಂತೆ, ನಿವೃತ್ತಿದಾರರ ನಿವೃತ್ತಿ ಮೊತ್ತಗಳೂ ಸಹ ಸರಕಾರದಿಂದ ಪಾವತಿಯಾಗಬೇಕು. ಈ ಕಾರ್ಯ ತಮ್ಮಿಂದ ಮಾತ್ರ ಸಾಧ್ಯ. ಆದ್ದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ಸರಕಾರದಿಂದ ನಿಧಿ ವರ್ಗಾವಣೆಗೊಳಿಸಿ, ಪಾವತಿಸುವ ಮೂಲಕ ನಿವೃತ್ತದಾರರ ಸಂಧ್ಯಾಕಾಲದ ಬದುಕಿಗೆಉತ್ತಮವಾತಾವರಣ ಕಲ್ಪಿಸಿಕೊಡಿರೆಂದು ವೇದಿಕೆಯ ವಾಯ್.ಎಂ.ಶಿವರಡ್ಡಿ, ರಫೀಕ್ ಅಹಮದ ನಾಗನೂರ, ಆರ್.ಜಿ. ಮೊರೆ, ತಿಪ್ಪೇಶ್ವರ ಅಣಜಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English