ಕಾರ್ಕಳ : ಪುಣೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನ ಚಿಕ್ಕಲ್ ಬೆಟ್ಟು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸುನೀಲ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.
ಸುನೀಲ್ ಶೆಟ್ಟಿ ಪುಣೆಯಲ್ಲಿ ಹೊಟೇಲ್ ಉದ್ಯಮ ನಡೆಸುತಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಪುಣೆಯಿಂದ ಊರಿಗೆ ಮರಳಿದ್ದರು. ಎಂಟು ತಿಂಗಳಿಂದ ಮನೆಯಲ್ಲಿ ಇದ್ದ ಅವರು ರವಿವಾರ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ ಬಳಿಕ ಪರವಾನಿಗೆಯ ಕೋವಿ ಹಿಡಿದುಕೊಂಡು ಮನೆಯ ಮುಂಭಾಗದ ಕೃಷಿ ತೋಟದ ಕಡೆಗೆ ತೆರಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುನೀಲ್ ಶೆಟ್ಟಿ ಪತ್ನಿ, ಪುತ್ರಿ ಯನ್ನು ಅಗಲಿದ್ದಾರೆ.
ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Click this button or press Ctrl+G to toggle between Kannada and English