ಚೆನೈ ಚಿತ್ರ ಮಂದಿರಗಳಲ್ಲಿ ಯೋಗರಾಜ್ ಭಟ್ ಡ್ರಾಮಾ ತೆರೆಗೆ

5:36 PM, Saturday, December 8th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Dramaಬೆಂಗಳೂರು :ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಯೋಗರಾಜ್ ಭಟ್ ರ ಹೊಸ ಚಿತ್ರ ‘ಡ್ರಾಮಾ’ ಚೆನೈ ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಮ್ಮವು ಸಣ್ಣ ಬಜೆಟ್ ಚಿತ್ರಗಳು. ಪರಭಾಷಾ ಚಿತ್ರಗಳ ನಡುವೆ ಪೈಪೋಟಿ ಮಾಡುವುದು ಕಷ್ಟ ಎಂದು ಬಂಡಲ್ ಬಿಡುತ್ತಿದ್ದವರಿಗೆ ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಚಿತ್ರ ಹೊಸ ದಾರಿ ತೋರಿಸಿದೆ. ಚೆನ್ನೈನ ವಿರುಗಂಬಾಕಂನ ಆರ್ಕಾಟ್ ರಸ್ತೆಯಲ್ಲಿರುವ ಫೇಮ್ ನ್ಯಾಶನಲ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ‘ಡ್ರಾಮಾ’ ಬಿಡುಗಡೆಯಾಗಿದೆ. ಡಿಸೆಂಬರ್ 7ರಂದು ಬಿಡುಗಡೆಯಾಗಿರುವ ಈ ಚಿತ್ರ ಪ್ರತಿದಿನ 12 ಗಂಟೆಗೆ ಒಂದು ಶೋ ಪ್ರದರ್ಶನಗೊಳ್ಳುತ್ತಿದೆ. ಇದೇ ಡಿಸೆಂಬರ್ 13ರವರೆಗೂ ಚಿತ್ರವನ್ನು ನೋಡಬಹುದು.

ಒಳ್ಳೆಯ ಕಥೆ, ಉತ್ತಮ ನಿರೂಪಣೆ, ಮನರಂಜನಾತ್ಮಕ ಅಂಶಗಳಿಂದ ಕೂಡಿದ ಸ್ವಮೇಕ್ ಚಿತ್ರಗಳನ್ನು ಪ್ರೇಕ್ಷಕರು ಕೈಬಿಡಲ್ಲ ಎಂಬುದು ಈಗಾಗಲೆ ಸಾಬೀತಾಗಿದೆ. ಇದೇ ಅಂಶಗಳೊಂದಿಗೆ ಬಂದ ‘ಡ್ರಾಮಾ’ ಚಿತ್ರವೂ ಈ ಮಾತಿಗೆ ಹೊರತಲ್ಲ. ಬಾಕ್ಸ್ ಆಫೀಸಲ್ಲೂ ಗೆದ್ದಿದೆ. ಡ್ರಾಮಾ ಚಿತ್ರಕ್ಕಿಂತ ಈ ಹಿಂದೆ ಬಿಡುಗಡೆಗೊಂಡ ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾಬಾಂಡ್ ಹಾಗೂ ದಿ ರಾಜ್ ಶೋ ಮ್ಯಾನ್ ಚಿತ್ರಗಳು ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಂಡಿವೆ. ಈಗ ಡ್ರಾಮಾ ಕೂಡ ಅದೇ ರೀತಿಯ ಅಲೆ ಎಬ್ಬಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English