ಮಂಗಳೂರು : ನಗರದಿಂದ ಹೊರವಲಯದಲ್ಲಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮದಲ್ಲಿ ಕೊರೋನಾ ವಿರಾಮದ ಬಳಿಕ ಮತ್ತೆ ಬೋಟಿಂಗ್ ಆರಂಭವಾಗಿದೆ.
ಈ ಬಾರಿ ಸರಕಾರದ ಕೋವಿಡ್ ನಿಯಮಗಳ ಸೂಚನೆಯಂತೆ ಬೋಟ್ ಗಳನ್ನು ಪ್ರತಿ ದಿನ ಸ್ಯಾನಿಟೈಸಷನ್ ಮಾಡಲಾಗುತ್ತದೆ. ಬೋಟ್ ಗಳಲ್ಲಿ ಸಂಚರಿಸುವ ಮುನ್ನ ಪ್ರತಿಯೊಬ್ಬರನ್ನು ಸ್ಯಾನಿಟೈಸಷನ್ ಮಾಡಿ, ಸ್ಕ್ಯಾನಿಂಗ್ ಮಾಡಲಾಗುವುದು ಎಂದು ದೋಣಿ ವಿಹಾರ ಕೇಂದ್ರದ ಮೇಲ್ವಿಚಾರಕರಾದ ಸಂದೀಪ್ ಬಿ.ಕೆ ತಿಳಿಸಿದ್ದಾರೆ.
ದೋಣಿವಿಹಾರಿಗಳಿಗೆ ವಾರದ ಏಳು ದಿನಗಳು ದೋಣಿ ವಿಹಾರ ಕೇಂದ್ರ ತೆರೆದಿರುತ್ತದೆ, ಪೆಡಲ್ ಬೋಟ್, ಫ್ಯಾಮಿಲಿ ಬೋಟ್ ಲಭ್ಯವಿರುತ್ತದೆ. ಸುರಕ್ಷತೆಗಾಗಿ ಲೈಫ್ ಜಾಕೆಟ್, ನುರಿತ ಈಜುಗಾರರು ಜೊತೆಗಿರುತ್ತಾರೆ ಎಂದು ಅವರು ತಿಳಿಸಿರುತ್ತಾರೆ.
ಜೊತೆಗೆ ಪಿಲಿಕುಳ ದಲ್ಲಿ ಜೂ, ಗುತ್ತಿನ ಮನೆ ತೆರೆದಿದೆ. ತಾರಾಲಯ, ವಿಜ್ಞಾನ ಕೇಂದ್ರ, ಮಾನಸ ವಾಟರ್ ಪಾರ್ಕ್ ತೆರೆದಿರುವುದಿಲ್ಲ.
Click this button or press Ctrl+G to toggle between Kannada and English