ದೇವರ ಸನ್ನಿಧಾನದಲ್ಲಿ ಕೆಟ್ಟ ಆಲೋಚನೆಗಳು ಬರುತ್ತಿದೆಯೇ? ಕೆಲವು ಭಾವನೆಗಳ ಅರ್ಥ ಹೀಗಿದೆ

7:00 AM, Wednesday, September 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

poojaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಪೂಜೆಯ ಸಂದರ್ಭದಲ್ಲಿ ಕೆಲವು ಸಲ ನಿಮ್ಮಲ್ಲಿ ಬದಲಾವಣೆ ಕಾಣಬಹುದು. ಕೆಲವರಲ್ಲಿ ಆಕಳಿಕೆ, ಕಣ್ಣೀರು, ದಿವ್ಯ ಕಳೆ, ಆಲಸ್ಯ ಇಂತಹ ಭಾವನೆಗಳು ಗೋಚರವಾಗುತ್ತದೆ ಅಥವಾ ಪೂಜೆ ಮಾಡುವಾಗ ನಮ್ಮ ಮನಸ್ಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ.

ಇವುಗಳು ಆಗಲು ಕಾರಣ ಆ ಜಾಗದಲ್ಲಿ ಇರತಕ್ಕಂತಹ ಋಣಾತ್ಮಕ ಹಾಗೂ ಧನಾತ್ಮಕ ಅಲೆಗಳು. ಧನಾತ್ಮಕ ಅಲೆಗಳು ಇದ್ದಾಗ ನಿಮ್ಮ ಮನಸ್ಸು ಪ್ರಫುಲ್ಲತೆಯಿಂದ ಹಾಗೂ ನಿಮ್ಮ ಬೇಡಿಕೆಗಳಿಗೆ ಉತ್ತಮ ರೀತಿಯಾದಂತಹ ಫಲಗಳು ಅಥವಾ ಶಕುನಗಳು ಕಂಡುಬರುತ್ತದೆ, ಆದರೆ ಋಣಾತ್ಮಕ ಅಲೆಗಳು ಕೂಡಿದ್ದಾಗ ಕೆಟ್ಟ ಆಲೋಚನೆಗಳು ಸಹ ಮೂಡುತ್ತದೆ.

ಕೆಲವೊಮ್ಮೆ ನಿಮ್ಮಲ್ಲಿನ ಏಕಾಗ್ರತೆಯ ಕೊರತೆ ಹಾಗೂ ಭಕ್ತಿ ಭಾವನೆಗಳ ಅಲಕ್ಷದ ಸ್ವಭಾವ ಇವುಗಳು ಸಹ ನಿಮ್ಮ ಆಲೋಚನೆಯನ್ನು ವ್ಯತಿರಿಕ್ತ ಗೊಳಿಸುವ ಸಾಧ್ಯತೆ ಇರುತ್ತದೆ.

ದೈವವನ್ನು ಪೂಜಿಸುವಾಗ ಭಕ್ತಿ ಬಹಳ ಮುಖ್ಯ ಇದುವೇ ಶಕ್ತಿಯಾಗಿ ಪರಿಭ್ರಮಿಸುತ್ತದೆ. ಆದಷ್ಟು ಮಂತ್ರೋಚ್ಚಾರ ಸ್ಪಷ್ಟವಾಗಿ ಹಾಗೂ ಹಿಡಿತವಿಟ್ಟು ಪೂಜೆ ನಡೆಸಿ. ಮಂತ್ರಗಳಿಗೆ ತನ್ನದೇ ಆದಂತಹ ಶಕ್ತಿ ಹಾಗೂ ಆಧ್ಯಾತ್ಮಿಕ ನೆಲೆಗಟ್ಟು ಇರುತ್ತದೆ. ಇವುಗಳು ನಿಮ್ಮ ಮನಸ್ಸನ್ನು ಏಕಾಗ್ರತೆಯಿಂದ ಇರಲು ಸಹಕಾರ ನೀಡುತ್ತದೆ ಹಾಗೂ ನಿಮ್ಮ ಬೇಡಿಕೆಗಳು ನಿಮ್ಮ ವಶದಲ್ಲಿ ಬರುವ ಹಾಗೆ ನೋಡಿಕೊಳ್ಳುತ್ತದೆ. ನಿಮ್ಮಲ್ಲಿನ ಅನಗತ್ಯ ಮಾನಸಿಕ ವಿಕಲ್ಪಗಳನ್ನು ಸಹ ದೂರ ಮಾಡುತ್ತದೆ. ಮಂತ್ರದಿಂದ ಪೂಜೆ ನಡೆಸುವ ಕಾರ್ಯವು ನಿಮ್ಮ ಏಕಾಗ್ರತೆಗಾಗಿ ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ನಮ್ಮ ಹಿರಿಯರು ಇದನ್ನು ನಮಗೆ ವರ್ಗಾಯಿಸಿದ್ದಾರೆ.

ದೇವರ ಮುಂದೆ ಕಣ್ಣೀರು ಬಂದರೇ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ, ಆಲಸ್ಯತನ ಹೊಂದಿದ್ದರೆ ನಿಮ್ಮಲ್ಲಿನ ಅಹಂಕಾರವನ್ನು ಸರಿಪಡಿಸಿಕೊಳ್ಳಬೇಕೆಂಬ ನಿದರ್ಶನ, ಆಕರ್ಷಕ ಕಳೆ ಹೊಂದಿದ್ದರೆ ದೈವ ಪ್ರಸನ್ನ ವಾಗಿದೆ ಎಂಬ ಅರ್ಥ, ಪದೇಪದೇ ದೇವರ ಸನ್ನಿಧಾನದಲ್ಲಿ ಕೆಟ್ಟ ಆಲೋಚನೆಗಳು ಬರುತ್ತಿದ್ದರೆ ದುಷ್ಟಶಕ್ತಿಗಳು ತೊಂದರೆ ಮಾಡುತ್ತಿದೆ ಎಂಬುದಾಗಿ ತಿಳಿಯಬೇಕು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English