ಕಾಸರಗೋಡು : ಮುಸ್ಲಿಂ ಲೀಗ್ ಕಾರ್ಯಕರ್ತನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಸೆ.29ರಂದು ರಾತ್ರಿ ನಡೆದಿದೆ.
ಉಪ್ಪಳ ಕೈಕಂಬದ ಆದಂ ಖಾನ್ ( 24) ಪರಾರಿಯಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಪಡನ್ನಕ್ಕಾಡ್ ನಲ್ಲಿರುವ ಕೋವಿಡ್ ನಿಗಾ ಕೇಂದ್ರದಿಂದ ತಪ್ಪಿಸಿ ಪರಾರಿಯಾಗಿದ್ದಾನೆ. ಕೇಂದ್ರದ ಕಿಟಿಕಿ ಮುರಿದು ಈತ ಪರಾರಿಯಾಗಿದ್ದಾನೆ. ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾ ಎಂಬವರ ಕೊಲೆ ಯತ್ನ ಪ್ರಕರಣದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಾದ ಆದಂ ಖಾನ್ ಹಾಗೂ ಈತನ ಸಹಚರ ನೌಶಾದ್ ತಲೆಮರೆಸಿಕೊಂಡಿದ್ದರು. ಕಾಸರಗೋಡು ಡಿವೈಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿತ್ತು.
ನ್ಯಾಯಾಲಯದ ಪ್ರಕ್ರಿಯೆ ನಡೆದು ಕೋವಿಡ್ ನಿಗಾ ಕೇಂದ್ರದಲ್ಲಿರಿಸಲಾಗಿತ್ತು. ಈ ನಡುವೆ ನಿನ್ನೆ ರಾತ್ರಿ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English