ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ 116ನೇ ಜನ್ಮದಿನವನ್ನು ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಗೌರವ ಸಲ್ಲಿಸಿದ್ದಾರೆ.
ಗಾಂಧೀಜಿಯವಸ ಸ್ಮಾರಕ ರಾಜ್’ಘಾಟ್ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಸ್ಮಾರಕ ವಿಜಯ್ ಘಾಟ್’ಗೆ ತೆರಳಿರುವ ಪ್ರಧಾನಿ ಮೋದಿಯವರು ನಮನ ಸಲ್ಲಿಸಿದರು.
ಮಹಾತ್ಮ ಗಾಂಧೀಜಿಯವರ ಜನ್ಮದಿನ ಹಿನ್ನೆಲೆಯಲ್ಲಿ ಶುಭಾಶಯ ಕೋರಿರುವ ಪ್ರಧಾನಿ ಮೋದಿಯವರು, ಗಾಂಧಿ ಜಯಂತಿಯಂದು ಪ್ರೀತಿಯ ಬಾಪುವಿಗೆ ನಮಸ್ಕರಿಸುತ್ತೇನೆ. ಅವರ ಜೀವನ ಮತ್ತು ಉದಾತ್ತ ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ರಚಿಸುವಲ್ಲಿ ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ ಎಂದು ಹೇಳಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ಕೋರಿ, ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರು ಸ್ಥಿರ ಮತ್ತು ಅತ್ಯಂತ ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯನ್ನು ನಿರೂಪಿಸಿದ್ದರು. ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದರು. ಭಾರತಕ್ಕಾಗಿ ಅವರು ಮಾಡಿದ ಎಲ್ಲದಕ್ಕೂ ಆಳವಾದ ಕೃತಜ್ಞತೆಗಳೊಂದಿಗೆ ಅವರ ಜಯಂತಿಯಲ್ಲಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆಂದು ಮೋದಿ ಹೇಳಿದ್ದಾರೆ.
ಇದರಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾತ್ಮ ಗಾಂಧೀಜಿಯವರ ಜನ್ಮ ದಿನ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುತ್ತಿದೆ. ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಗಾಂಧೀಜಿಯವರು ಮಾನವೀಯತೆಯ ಸ್ಫೂರ್ತಿಯ ಮೂಲವಾಗಿದ್ದಾರೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English