ಮಕ್ಕಳಾಗದವರಿಗೆ ಮಕ್ಕಳು ಮಾಡುವ ಔಷಧಿ ನೀಡುವುದಾಗಿ ನಂಬಿಸಿ ಹಲವರಿಗೆ ಮೋಸ, ಓರ್ವನ ಬಂಧನ

5:25 PM, Friday, October 2nd, 2020
Share
1 Star2 Stars3 Stars4 Stars5 Stars
(No Ratings Yet)
Loading...

manjunatha ಕಾರವಾರ: ಮಕ್ಕಳಾಗದವರಿಗೆ ಮಕ್ಕಳು ಮಾಡುವ ಔಷಧಿ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ,  ಮಕ್ಕಳಾಗದ ಕುಟುಂಬದವರನ್ನು ಸಂಪರ್ಕಿಸಿ ಅವರಿಗೆ ಮಕ್ಕಳಾಗುವ ಗಿಡುಮೂಲಿಕೆ ಔಷಧಿ ಈತ ನೀಡುತ್ತಿದ್ದ.

ಬಂಧಿತನನ್ನು ಆಂಧ್ರಪ್ರದೇಶದ ಅನಂತಪುರ ಮೂಲದ ಬಂಡಿ ಮಂಜುನಾಥ ಎಂದು ಗುರುತಿಸಲಾಗಿದೆ.

ಶಿರಸಿ ಗ್ರಾಮೀಣ ಪ್ರದೇಶದಲ್ಲಿ ಪರಿಚಯಸ್ಥರಂತೆ ವರ್ತಿಸಿ ಅವರಿಗೆ ಮಕ್ಕಳಾಗುವ ಗಿಡಮೂಲಿಕೆ ಔಷಧಿ ನೀಡುವುದಾಗಿ ಹೇಳಿ ಸಾವಿರಾರು ರೂಪಾಯಿಗಳನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದ್ದು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತ ಈಗ ನ್ಯಾಯಾಂಗ ಬಂಧನದಲ್ಲಿ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಕ್ಕಳಾಗದ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಬಳಿಕ ಅವರನ್ನು ಸಂಪರ್ಕಿಸಿ ಮಕ್ಕಳು ಮಾಡುವ ಔಷಧಿ ಈತ ನೀಡುತ್ತಿದ್ದ.

ರಾಜ್ಯಾದ್ಯಂತ ಹಲವು ಜನರಿಗೆ ಮಕ್ಕಳಾಗುವ ಔಷಧಿ ನೀಡುವುದಾಗಿ ನಂಬಿಸಿ ವಂಚಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಬೃಹತ್ ಜಾಲವನ್ನು ಇರುವ ಬಗ್ಗೆ ತಿಳಿದು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಸಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ.ಟಿ.ನಾಯಕ್ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ನಿರೀಕ್ಷಕ ಪ್ರದೀಪ್.ಬಿ.ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ನಂಜಾ ನಾಯ್ಕ. ಎನ್.ಶ್ಯಾಮ್ ಪಾವಸ್ಕರ. ಪ್ರೊ. ಪಿ.ಎಸ್.ಐ ನಾಗೇಂದ್ರ ನಾಯ್ಕ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English