ಕುಂದಾಪುರ : ರವಿವಾರ ರಾತ್ರಿ 9.30 ರ ಸುಮಾರಿಗೆ ಕುಂದಾಪುರದ ಕೋಟೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಖಾಸಗಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮ್ರತಪಟ್ಟಿದ್ದಾನೆ. ಮೃತ ಬೈಕ್ ಸವಾರ ಅಂಪಾರು ಮೂಲದ ಸತೀಶ್ ಶೆಟ್ಟಿ(28) ಎಂಬುವವರಾಗಿದ್ದಾರೆ. ಸತೀಶ್ ಮೂಲತಃ ಅಂಪಾರಿನವರಾಗಿದ್ದು ಕಳೆದ ಕೆಲ ವರ್ಷಗಳಿಂದ ಹೈದರಾಬಾದಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ತಂದೆ ಶೇಖರ ಶೆಟ್ಟಿಯವರ ನಿಧನದ ಸಲುವಾಗಿ ಊರಿಗೆ ಆಗಮಿಸಿದ ಅವರು ತೆಕ್ಕಟ್ಟೆಯ ಹೋಟೇಲ್ವೊಂದರಲ್ಲಿ ಕೆಲಸ ಮಾಡಿಕೊಂಡು ಊರಿನಲ್ಲಿಯೇ ನೆಲೆಸಿದ್ದರು ಎನ್ನಲಾಗಿದೆ.
ಎಂದಿನಂತೆ ಅಂಪಾರಿನಿಂದ ತೆಕ್ಕಟ್ಟೆಗೆ ಕೆಲಸಕ್ಕೆ ತೆರಳುತ್ತಿದ್ದ ಸತೀಶ್ ಶೆಟ್ಟಿ ಬೈಕ್ ಗೆ ನಿನ್ನೆ ಮಂಗಳೂರಿನಿಂದ ಗುಲ್ಬರ್ಗಕ್ಕೆ ತೆರಳುತ್ತಿದ್ದ ವಿ.ಆರ್.ಎಲ್. ಕಂಪೇನಿಯ ಬಸ್ ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿರುವಾಗ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇಲ್ಲಿನ ತಿರುವು ಅಪಘಾತಕ್ಕೆ ಕಾರಣವಾಗುತ್ತಿದೆ ಆದ್ದರಿಂದ ತಿರುವನ್ನು ಅಪಘಾತ ವಲಯವೆಂದು ಘೋಷಿಸಬೇಕೆಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.
Click this button or press Ctrl+G to toggle between Kannada and English