ಅಕ್ರಮವಾಗಿ ದನ ಕರುಗಳನ್ನು ವಧೆಗೆ ಸಾಗಿಸುತ್ತಿದ್ದಾಗ ರಸ್ತೆಗೆ ಬಿದ್ದ ಆರು ಕರುಗಳು, ಬೆನ್ನಟ್ಟಿದ ವಿಹೆಚ್ ಪಿ ಕಾರ್ಯಕರ್ತರು

4:33 PM, Sunday, October 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

 

vhp-protestಮಂಗಳೂರು: ಅಕ್ರಮವಾಗಿ 30-35 ದನದ ಕರುಗಳನ್ನು 407 ವಾಹನವೊಂದರಲ್ಲಿ ಕುದ್ರೋಳಿಯ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆರು ಕರುಗಳು ವಾಹನದಿಂದ ಬಿದ್ದು  ಗಂಭೀರ ಗಾಯಗೊಂಡ ಘಟನೆಯನ್ನು ಖಂಡಿಸಿ ನಗರದ ಮಣ್ಣಗುಡ್ಡ ಗುರ್ಜಿ ಬಳಿ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನೇತ್ರಾವತಿ ಎಂಬ ಹೆಸರಿನ 407 ವಾಹನವೊಂದರಲ್ಲಿ ನಸುಕಿನ ಜಾವದಲ್ಲಿ 30-35 ದನದ ಕರುಗಳನ್ನು ಅಮಾನವೀಯವಾಗಿ ತುಂಬಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೆಎಸ್ಆರ್ ಟಿಸಿ ಬಳಿ ಹಂಪ್ಸ್ ನಲ್ಲಿ ವಾಹನದಿಂದ 2 ದನದ ಕರುಗಳು ಬಿದ್ದಿವೆ. ಇದನ್ನು ಕಂಡು ಸ್ಥಳೀಯರು ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ವಾಹನವನ್ನು ವಿಹಿಂಪ-ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿದ್ದಾರೆ. ಈ ಸಂದರ್ಭ ವಾಹನದಿಂದ ಎ.ಜೆ. ಆಸ್ಪತ್ರೆಯ ಬಳಿ, ಉರ್ವಸ್ಟೋರ್, ಮಣ್ಣಗುಡ್ಡ ಗುರ್ಜಿ ಬಳಿ ಹಂಪ್ಸ್ ನಲ್ಲಿ ಕರುಗಳು ಬಿದ್ದಿವೆ.

ಇದರಿಂದ ಆಕ್ರೋಶಗೊಂಡ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಬೆಳ್ಳಂಬೆಳಗ್ಗೆ 5 ಗಂಟೆಗೆ ಮಣ್ಣಗುಡ್ಡ ಗುರ್ಜಿ ಬಳಿ ಎರಡು ದನದ ಕರುಗಳನ್ನು ಕಟ್ಟಿ ರಸ್ತೆ ತಡೆ ನಡೆಸಿ ತಕ್ಷಣ 407 ವಾಹನ ಸಹಿತ ಗೋಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ರಸ್ತೆ ತಡೆ ನಡೆಸದಂತೆ ಎಷ್ಟೇ ಮನವಿ ಮಾಡಿದರೂ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದರು.

ಪೊಲೀಸರು ದನದ ಕರುಗಳನ್ನು ಅಲ್ಲಿಂದ ಠಾಣೆಗೆ ಟೆಂಪೊದಲ್ಲಿ ಕೊಂಡೊಯ್ಯಲು ಯತ್ನಿಸಿದಾಗ ವಿಶ್ವ ಹಿಂದೂ ಪರಿಷತ್ – ಬಜರಂಗದಳದ ಕಾರ್ಯಕರ್ತರು ಆಕ್ರೋಶಿತರಾಗಿ, ಟೆಂಪೊವನ್ನು ಹಿಂದೆ ಕಳುಹಿಸಿದ್ದಾರೆ. ಬಳಿಕ ಪೊಲೀಸರು ಕಾರ್ಯಕರ್ತರನ್ನು ಮನವೊಲಿಸಿದಾಗ 7.30 ಸುಮಾರಿಗೆ ದನದ ಕರುಗಳ ಸಹಿತ ಬರ್ಕೆ ಪೊಲೀಸ್ ಠಾಣೆಗೆ ತೆರಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English