ಬೆಳ್ತಂಗಡಿ : ಯುವ ಕಲಾವಿದ ಹಾಗೂ ಚಲನಚಿತ್ರ ನಟರಾಗಿದ್ದ ರಾಘವೇಂದ್ರ ಆಚಾರ್ಯಗೋಳಿಕಟ್ಟೆ ಅವರು ತಲೆಯ ಮೇಲೆ ಕಲ್ಲು ಕುಸಿದು ಬಿದ್ದ ಪರಿಣಾಮ ಅ.4 ರಂದು ದಾರುಣವಾಗಿ ಮೃತಪಟ್ಟಿದ್ದಾರೆ.
ರಾಘವೇಂದ್ರ ಆಚಾರ್ಯ ಅವರು ಬಳಪದ ಕಲ್ಲಿನಿಂದ ರೊಟ್ಟಿ ಮಾಡುವ ಹಂಚನ್ನು ತಯಾರಿಸುತ್ತಿದ್ದರು.
ತನ್ನ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕುಲುಮೆಯ ಮೇಲಿನಿಂದ ಏಕಾಏಕಿ ಕಲ್ಲೊಂದು ಜಾರಿ ತಲೆ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯವಾಗಿ ಅವರು ಅಕಾಲಿಕವಾಗಿ ಸಾವನ್ನಪ್ಪಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ, ಉಜಿರೆಯಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನ, ಐತಿಹಾಸಿಕ ಕನ್ನಡದ ನುಡಿಜಾತ್ರೆಯಾದ ಆಳ್ವಾಸ್ ನುಡಿಸಿರಿ, ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರಕಾರ ಸಂಯೋಜಿಸುವ ಕೃಷಿ ಮೇಳಗಳಲ್ಲಿ ಅವರು ಅನೇಕ ವರ್ಷಗಳಿಂದ ಬಳಪ ಕಲ್ಲಿನಲ್ಲಿ ರೊಟ್ಟಿ ಮಾಡುವ ಹಂಚನ್ನು ತಯಾರಿಸಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡಿ ಯಶಸ್ವಿಯಾಗಿದ್ದರು.
ಕಲಾವಿದರಾದ ಇವರು ತುಳು ನಾಟಕ ರಂಗಭೂಮಿಯಲ್ಲಿ ಅತ್ಯುತ್ತಮ ಹಾಸ್ಯ ಕಲಾವಿದರಾಗಿ, ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದರು.
ಮೃತರು ತಾಯಿ ಸುಮಿತ್ರಾ, ಪತ್ನಿ ಪ್ರಭಾ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English