ಕೊರೋನ ಯೋಧರು ಎಂದು ಆಸ್ಪತ್ರೆ ಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆಯೇ ಹೊರತು, ನಮಗೆ ಸೌಲಭ್ಯ ನೀಡುತ್ತಿಲ್ಲ

7:08 PM, Monday, October 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

contract doctorsಮಂಗಳೂರು : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಹೊರಗುತ್ತಿಗೆ ನೌಕರರ ಪ್ರತಿಭಟನೆ 12 ದಿನಕ್ಕೆ ಕಾಲಿಟ್ಟಿದ್ದು ನಗರದ ಮನಪಾ ಗಾಂಧಿ ಪ್ರತಿಮೆಯ ಬಳಿ ಸೋಮವಾರ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.

ಸರಕಾರದ ಆಸ್ಪತ್ರೆಯಲ್ಲಿ 15ರಿಂದ 18 ವರ್ಷಗಳಿಂದ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಇನ್ನೂ ಜಾರಿಯಾಗಿಲ್ಲ. ತಾನು ಕೂಡಾ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಗುತ್ತಿಗೆ, ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಕಾರ್ಮಿಕ ಇಲಾಖೆಯ ಸೌಲಭ್ಯ, ಬಿಪಿಎಲ್ ಯಾವುದೂ ಇಲ್ಲದೆ, ಕನಿಷ್ಠ ವೇತನವೂ ದೊರೆಯದೆ ಬದುಕಬೇಕಾಗಿದೆ. ಕೊರೋನ ಯೋಧರು ಎಂದು ನಮ್ಮನ್ನು ಆಸ್ಪತ್ರೆ ಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆಯೇ ಹೊರತು ಯಾವುದೇ ಹೆಚ್ಚುವರಿ ಸೌಲಭ್ಯ ನೀಡಲಾಗುತ್ತಿಲ್ಲ. ಬದಲಾಗಿ ನಮ್ಮ ಬೇಡಿಕೆ ಮುಂದಿಟ್ಟರೆ ನಮ್ಮನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಗ್ಯ ಕಾರ್ಯ ಕರ್ತೆ ವೀರಮ್ಮ ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಇಲ್ಲವಾಗಿದೆ. ಉದಾಹರಣೆಗೆ ಓರ್ವ ಸ್ಟಾಪ್ ನರ್ಸ್ ಗೆ 33 ಸಾವಿರ ರೂ. ವೇತನವಿದ್ದರೆ, ಗುತ್ತಿಗೆ ಆಧಾರದ ಸ್ಟಾಪ್ ನರ್ಸ್ ಗೆ ಅಷ್ಟೇ ಕೆಲಸ ಇರುತ್ತದೆ. ಆದರೆ ವೇತನ ಮಾತ್ರ 11 ಸಾವಿರ ರೂ. ಈ ರೀತಿಯ ತಾರತಮ್ಯ ಸರಕಾರದ ಆಸ್ಪತ್ರೆ ಗಳಲ್ಲಿಯೇ ನಡೆಯುತ್ತಿದೆ. ನಮಗೆ ಭರವಸೆಗಳು ಬೇಡ, ಸರಕಾರದ ಸ್ಪಷ್ಟ ಆದೇಶ ಬೇಕಾಗಿದೆ ಎಂದು ಗುತ್ತಿಗೆ ಆಧಾರದ ದುಡಿಯುತ್ತಿರು ವೈದ್ಯೆ ಡಾ.ಸೌಜನ್ಯಾ ಹೇಳಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English