ಮಂಗಳೂರು : ಈಗ ಕೋಸ್ಟಲ್ ವುಡ್ ನಲ್ಲಿ ಕಿರುಚಿತ್ರಗಳ ಜಮಾನ ಶುರುವಾಗಿದೆ. ತಮ್ಮದೇ ಪುಟ್ಟ ಬಂಡವಾಳ ಒಟ್ಟು ಸೇರಿಸಿ ಗ್ರಾಮೀಣ ಕಲಾವಿದರನ್ನು ಒಟ್ಟು ಹಾಕಿಕೊಂಡು ತುಳು ಭಾಷೆಯಲ್ಲಿ ಕಿರುಚಿತ್ರ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಸಂತೋಷ್ ಎಂ. ಪುಚ್ಚೇರ್ ಅವರ ನಿರ್ದೇಶನದ `ಕುಸಾಲ್ ಗ್’ ಸೇರಿಕೊಳ್ಳುತ್ತದೆ.
ಕೋಸ್ಟಲ್ ವುಡ್ ಚಿತ್ರನಗರಿಯಲ್ಲಿ ಈಗ ನಿಧಾನವಾಗಿ ಬಣ್ಣದ ಹೊಳಪು ಕಾಣಿಸಿಕೊಳ್ಳುತ್ತಿದೆ. ವರ್ಷಕ್ಕೆ ಒಂದು ಅಥವಾ ಅರ್ಧ ಚಿತ್ರಗಳಲ್ಲಿ ಕಾಲ ಕಳೆಯುತ್ತಿದ್ದ ಕೋಸ್ಟಲ್ ವುಡ್ ಖಜಾನೆಗೆ ಈಗ ಭರ್ಜರಿ ಚಿತ್ರಗಳು ಸೇರಿಕೊಳ್ಳುತ್ತಿದೆ. ಕಳೆದ ಒಂದು ವರ್ಷದ ಲೆಕ್ಕಚಾರದ ಪ್ರಕಾರ ಮೂರು ನಾಲ್ಕು ಚಿತ್ರಗಳು ಥಿಯೇಟರ್ ಗೆ ಬಂದು ತನ್ನದೇ ಕಮಾಲ್ ತೋರಿಸಿತ್ತು. ಹತ್ತಾರು ಚಿತ್ರಗಳು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡು ಕೋಸ್ಟಲ್ ವುಡ್ ಸಿನಿಮಾ ನಗರಿಗೆ ಬೆಲೆ ತಂದುಕೊಟ್ಟಿತ್ತು. ಈಗ ಇದೇಕೋಸ್ಟಲ್ ವುಡ್ ನಲ್ಲಿ ಕಿರುಚಿತ್ರಗಳ ಜಮಾನ ಶುರುವಾಗಿದೆ. ತಮ್ಮದೇ ಪುಟ್ಟ ಬಂಡವಾಳ ಒಟ್ಟು ಸೇರಿಸಿ ಗ್ರಾಮೀಣ ಕಲಾವಿದರನ್ನು ಒಟ್ಟು ಹಾಕಿಕೊಂಡು ತುಳು ಭಾಷೆಯಲ್ಲಿ ಕಿರುಚಿತ್ರ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ.
ಈ ಪಟ್ಟಿಯಲ್ಲಿ ಮೂಡುಬಿದರೆಯ ಪುಚ್ಚಮೊಗರು ಯುವಕ ಸಂತೋಷ್ ಎಂ `ಕುಸಾಲ್ ಗ್’ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಸಣ್ಣ ವೃತ್ತಿಯಲ್ಲಿರುವ 22ರ ಹರೆಯದ ಸಂತೋಷ್ ಮಾಡಿದ ಕಿರುಚಿತ್ರ `ಕುಸಾಲ್ ಗ್’ ಕೋಸ್ಟಲ್ ವುಡ್ ನಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕುವ ಜತೆಗೆ ಅತೀ ಸಣ್ಣ ವಯಸ್ಸಿನ ನಿರ್ದೇಶಕರೊಬ್ಬರು ಸಿಕ್ಕಿದ ಖುಷಿ ತುಳು ಪ್ರೇಕ್ಷಕರಿಗೆ ಲಭ್ಯವಾಗೋದರಲ್ಲಿ ಯಾವುದೇ ಸಂದೇಹ ಉಳಿಯೋದಿಲ್ಲ. ಮೂಡುಬಿದರೆ ಬರೀ ಶಿಕ್ಷಣ, ಜೈನಕಾಶಿ, ವಿದ್ಯಾಕಾಶಿ ಎನ್ನುವ ಟ್ಯಾಗ್ ಲೈನ್ ನಲ್ಲಿ ಹೊಸ ನಾಟಕ ಪ್ರತಿಭೆಗಳ ತವರೂರು ಎನ್ನುವ ಹೆಸರು ಕೂಡ ಸೇರಿಕೊಂಡಿದೆ.
ಇಲ್ಲಿನ ನಾಟಕ ತಂಡಗಳು, ರಂಗಭೂಮಿಯ ಕುರಿತಿರುವ ಕಾಳಜಿ, ನೃತ್ಯ ಮೊದಲಾದ ವಿಚಾರಗಳಿಂದ ಈ ಊರು ಸಾಂಸ್ಕೃತಿಕ ಕಾಶಿ ಎನ್ನಲು ಅಡ್ಡಿಯಾಗುವುದಿಲ್ಲ. ಇದೇ ಮೂಡುಬಿದರೆಯ ಆಸುಪಾಸಿನಲ್ಲಿಯೇ ಈ `ಕುಸಾಲ್ ಗ್’ ಕಿರುಚಿತ್ರದ ಚಿತ್ರೀಕರಣ ನಡೆದಿದೆ. ‘ಕುಸಾಲ್ ಗ್’ ಚಿತ್ರದಲ್ಲಿರುವ ಹಸಿರು ಪರಿಸರ, ದೈವ, ದೇವಸ್ಥಾನದ ಒಳನೋಟ, ಪಾತ್ರ ವರ್ಗದ ಪೋಷಣೆ ಎಲ್ಲವೂ ತುಳು ಪ್ರೇಕ್ಷಕ ವರ್ಗವನ್ನು ರಂಜಿಸದೇ ಇರಲಾರದು. ದೊಡ್ಡ ದೊಡ್ಡ ಬಜೆಟ್ ನಲ್ಲಿ ಚಿತ್ರ ಮುಗಿಸಲು ಪರದಾಡುವ ಇಂದಿನ ದಿನಗಳಲ್ಲಿ ಸರಿಸುಮಾರು 70 ಸಾವಿರ ರೂ.ನಲ್ಲಿ ಒಂದೂವರೆ ಗಂಟೆಗಳ ಭರ್ಜರಿ ಮನೋರಂಜನೆಯಿಂದ ಕೂಡಿದ ಚಿತ್ರವಾಗಿ `ಕುಸಾಲ್ ಗ್’ ಮೂಡಿಬಂದಿದೆ ಎನ್ನೋದು ಚಿತ್ರತಂಡ ಹೊರಹಾಕಿದ ಮಾಹಿತಿ.
ಪುಟ್ಟ ಚಿತ್ರ ದೊಡ್ಡ ಸಂದೇಶ:
ಚಿತ್ರದ ನಿರ್ದೇಶಕ ಸಂತೋಷ್ ಎಂ. ಪುಚ್ಚೇರ್( ಪುಚ್ಚಮೊಗರು) ಈಗಾಗಲೇ ಮೂಡುಬಿದರೆಯ ರಂಗಭೂಮಿಯಲ್ಲಿ ಹೊಳೆಯುತ್ತಿರುವ ಪುಟ್ಟ ನಕ್ಷತ್ರ. ಈಗಾಗಲೇ `ಅಯೇ ದಾನೇ ಅಂಚ’ ಮತ್ತು `ದೇವಿದಾ ಕಾರ್ನಿಕಾ’ ನಾಟಕಗಳನ್ನು ತುಳು ರಂಗಭೂಮಿಗೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ನಾಟಕ ನಿರ್ದೇಶನದ ಜತೆಗೆ ನಟನೆಯಲ್ಲೂ ಸಮರ್ಥನಾಗಿರುವ ಸಂತೋಷ್ ಮನದಲ್ಲಿ ಈ ಹಿಂದೆಯೇ ಇಂತಹ ಒಂದು ಕಿರುಚಿತ್ರ ನಿರ್ಮಾಣ ಮಾಡುವ ಕನಸ್ಸು ಹುಟ್ಟಿಕೊಂಡಿತ್ತು. ಆದರೆ ಚಿಕ್ಕ ವಯಸ್ಸಿನಲ್ಲಿ ಇಂತಹ ಒಂದು ದೊಡ್ಡ ಪ್ರಯತ್ನ ಮಾಡೋದು ಸುಲಭದ ಮಾತಲ್ಲ ಎಂದುಕೊಂಡು ಕನಸ್ಸಿನ ಪೊಟ್ಟಣವನ್ನು ಬಚ್ಚಿಟ್ಟುಕೊಂಡಿದ್ದರು.
ಆದರೆ ನಾಟಕ ರಚನೆಗಾರ ಜಯರಾಮ್ ನವಗ್ರಾಮದ ಅವರ ಕತೆಯೊಂದು ಸಂತೋಷ್ ಮನಸ್ಸನ್ನು ಸೆಳೆಯಿತು. ಪರಿಸರದ ಕುರಿತು ಜಾಗೃತಿ ಹುಟ್ಟುಹಾಕುವಂತಹ ಈ ಕತೆಯನ್ನು ಇಟ್ಟುಕೊಂಡು ಸಂತೋಷ್ ಸಂಭಾಷಣೆ ಬರೆಯಲು ರೆಡಿಯಾದರು. ನಂತರ ಮೂಡುಬಿದಿರೆಯ ಆಸುಪಾಸಿನಲ್ಲಿರುವ ಬದುಕಿನಲ್ಲಿ ಎಂದಿಗೂ ಕ್ಯಾಮೆರಾದ ಮುಂದೆ ನಿಲ್ಲದ ಕಲಾವಿದರನ್ನು ಕ್ಯಾಮೆರಾದ ಮುಂದೆ ತಂದು ನಿಲ್ಲಿಸಿ ಅವರಿಂದ ಉತ್ತಮ ನಟನೆಯನ್ನು ಹೊರತೆಗೆದು `ಕುಸಾಲ್ ಗ್’ ಚಿತ್ರ ಹೊರ ತೆಗೆದಿದ್ದಾರೆ. ಹಾಸ್ಯದ ಜತೆಯಲ್ಲಿ ಸಂದೇಶ ಇಟ್ಟುಕೊಂಡು ಬಂದಿರುವ ಕುಸಾಲ್ ಗ್ ನಲ್ಲಿ ಎಸ್.ಕೆ.ಎಸ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಗೊಂಡಿದೆ. ಭಾಸ್ಕರ್ ಎನ್. ಕೋಟ್ಯಾನ್ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿರ್ಮಾಣ ಮತ್ತು ನಿರ್ವಹಣೆಯನ್ನು ಸಂತೋಷ್ ಎಸ್. ಕೋಟೆಬಾಗಿಲು, ಸಂಗೀತ ಸಂಯೋಜನೆಯನ್ನು ಆರ್.ಕೆ. ಬೆಳುವಾಯಿ ಹಾಗೂ ಸಾಹಿತ್ಯದಲ್ಲಿ ಪ್ರತೀನ್ ಪುಚ್ಚಮೊಗರು ಕೈಯಾಡಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಉಮೇಶ್ ಪೊರಿಮೇಲು, ಸಂತೋಷ್ ಆಚಾರ್ಯ ಜಾಂಬು ಇವರು ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಪುಚ್ಚಮೊಗರು ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ನಾಯ್ಕ್ ಕಾಣಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಯಾವ ರೀತಿಯಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ಮೆರೆಯಲು ಇತರರಿಗೆ ಮಾದರಿಯಾಗುವ ಕತೆಯೇ ಕುಸಾಲ್ ಗ್ ಕಿರುಚಿತ್ರದ ಮುಖ್ಯ ಬೇಸ್ ಪಾಯಿಂಟ್. ಪುಟ್ಟ ಕಿರುಚಿತ್ರವೊಂದು ದೊಡ್ಡ ಸಂದೇಶವನ್ನು ಸಾರುವಲ್ಲಿ ಕುಸಾಲ್ ಗ್ ಚಿತ್ರ ಯಶಸ್ವಿಯಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಂತೋಷ್ ಎಂ ಪುಚ್ಚಮೊಗರು. ಟೋಟಲಿ ಕೋಸ್ಟಲ್ ವುಡ್ ಸಿನಿಮಾ ನಗರಿಗೆ ಹೊಸ ನಿರ್ದೇಶಕ ಸಂತೋಷ್ ಪುಚ್ಚಮೊಗರು ಹೊಸ ದಿಶೆ ನೀಡುವ ಎಲ್ಲ ಸಾಧ್ಯತೆಗಳು ಸಾಕಷ್ಟಿದೆ ಎನ್ನುವ ಮಾತು ಕುಸಾಲ್ ಗ್ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಅನ್ನಿಸದೇ ಇರಲಾರದು.
`ಕುಸಾಲ್ ಗ್’ ಚಿತ್ರ ನಿರ್ದೇಶಕ ಸಂತೋಷ್ ಎಂ. ಪುಚ್ಚೇರ್ ಬರುವ ವರ್ಷ ದೊಡ್ಡ ಚಿತ್ರವೊಂದನ್ನು ಕರಾವಳಿಯ ಥಿಯೇಟರ್ ಗೆ ಬಿಡುವ ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರಕ್ಕೆ ಈಗಾಗಲೇ ಮರ್ಲ್ ಪಿರಿನಾಗಾ ( ಹುಚ್ಚು ಬಿಟ್ಟಾಗ) ಎನ್ನುವ ಹೆಸರು ಇಡಲಾಗಿದೆ. ಉಳಿದಂತೆ ಲವ್, ಐತಿಹಾಸಿಕ, ಸಾಹಸ ಎಲ್ಲವೂ ಈ ಚಿತ್ರದಲ್ಲಿ ಸೇರಿಕೊಳ್ಳಲಿದೆ. ಎರಡೂವರೆ ಗಂಟೆಯ ಚಿತ್ರ ಸಂಪೂರ್ಣ ಹಾಸ್ಯದ ಜತೆಗೆ ಸಂದೇಶವನ್ನು ಸಾರಲಿದೆ. ಈಗಾಗಲೇ ಜಯರಾಮ್ ನವಗ್ರಾಮ ಚಿತ್ರದ ಕತೆ ಸಿದ್ಧಪಡಿಸಿಕೊಂಡಿದ್ದಾರೆ. ಎರಡು ತಿಂಗಳುಗಳ ಕಾಲ ಅದರ ತಯಾರಿ ನಡೆದ ನಂತರ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ದಕ್ಷಿಣ ಕನ್ನಡ ಸೇರಿದಂತೆ ಉಡುಪಿಯ ಕೆಲವೊಂದು ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ನಿರ್ಮಾಪಕರಾಗಿ ಸಂತೋಷ್ ಎಸ್. ಕೋಟೆಬಾಗಿಲು ಇದ್ದಾರೆ. ಆದರೆ `ಕುಸಾಲ್ ಗ್’ ಚಿತ್ರದ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ ! ಬದಲಾಗಿ ಚಿತ್ರಕ್ಕೆ ಹಿರಿಯ ಕಲಾವಿದರು ಸೇರಿಕೊಳ್ಳಲಿದ್ದಾರೆ.
Click this button or press Ctrl+G to toggle between Kannada and English
June 21st, 2014 at 23:40:03
geleyare
santhosh kai ge ondu kelasa kodi
December 30th, 2013 at 21:00:22
ಸಂತೋಷ್ ಎಂ ಪುಚ್ಚೇರ್ ಇವರು
ನನ್ನ ಸ್ವಂತ ಕೃತಿಗಳಾದ “ದೈವದ ಕಾರ್ಣಿಕ” “ಆಯೆ ದಾನೆ ಅಂಚ” ಎಂಬ ಎರಡು ನಾಟಕಗಳನ್ನು ತಮ್ಮ ಕುಂಭಕಂಠಿನೀ ಸಂಘದ ಕಲಾವಿದರೊಂದಿಗೆ ಅಭಿನಯಿಸಿದ್ದಾರೆ ಅದರಲ್ಲಿ ನನಗು ಅವಕಾಶ ನೀಡಿದಾರೆ
ಅದರಲ್ಲೂ .”ಆಯೆ ದಾನೆ ಅಂಚ.” ಎಂಬ ಕಿರು ನಾಟಕ
“ಕುಸಾಲ್ಗ್” ಎಂಬ ಹೆಸರಲಿ ಟೆಲಿಫಿಲಂ ಕೂಡಾ ಆಗಿದೆ
November 15th, 2013 at 22:10:12
ಸಂತೋಷ್ ಎಂ ಪುಚ್ಚೇರ್ ಎಳೆ ಪ್ರಾಯದಲ್ಲಿ ಥರ್ಮಾಕೋಲ್ ನಿಂದ ಒಂದು ದೇವಸ್ಥಾನ ನಿರ್ಮಿಸಿದ್ದರು. ಅದನ್ನು ನೋಡಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಿರ್ಮಿಸುವುದು ದೊಡ್ಡದೇನಲ್ಲ ಆದರೆ ಅದಕ್ಕೆಷ್ಟು ತಾಳ್ಮೆ ಏಕಾಗ್ರತೆ ಬೇಕು.
ಆ ಬಳಿಕ ಅವರು ಪುಚ್ಚಮೊಗರಿನಲ್ಲಿ ಮೊದಲ ಸಲ ಬಣ್ಣ ಹಚ್ಚಿದ ನಾಟಕ. ಸತ್ಯ ತೆರಿನಗ, ಅದ್ಭುತ ಅಭಿನಯ. ಆದರೆ ನನಗೆ ಗೊತ್ತಿಲ್ಲದ ವಿಷಯ ಏನೆಂದರೆ ಅದು ಅವರು ನಟಿಸಿದ ಮೊದಲ ನಾಟಕ ಎಂಬುದು. ಅದು ನನಗೆ ಗೊತ್ತಾದಾಗ ನಿಜವಾಗಿಯೂ ಷಾಕ್ ಆಗಿತ್ತು.
ಈಗ ತುಳುನಾಡ ಕಲಾವಿದೆರ್ ಬೆದ್ರ ಇವರು ಸಂತೋಷ್ ಎಂ ಪುಚ್ಚೇರ್ ರಚಿಸಿರುವ ನನ ಏತ್ ದಿನ ನಾಟಕದ ರಂಗ ತಾಲೀಮಿನಲ್ಲಿ ನಿರತರಾಗಿದ್ದಾರೆ. ಸಮರ್ಥ ನಿರ್ದೇಶನದ ಅಡಿಯಲ್ಲಿ ಈ ನಾಟಕ ತಯಾರಾಯಿತೆಂದರೆ ಈ ವರ್ಷದ ದಾಖಲೆಯ ನಾಟಕ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಕುಸಾಲ್ ಗ್ ನೋಡಿ ಯಾರೂ ಸಂತೋಷ್ ನಿರ್ದೇಶನಕ್ಕೆ ಮಾರ್ಕ್ ಕೊಡಬೇಕಿಲ್ಲ. ಏಕೆಂದರೆ ಕುಸಾಲ್ ಗ್ ಕಥೆಯೇ ಪರಿಸರದ ಖಾಲಜಿಯ ಕತೆ. ಆ ಕತೆಯನ್ನು ಟೆಲಿಫಿಲಂ ಮಾಡಿ ಗೆಲ್ಲಬೇಕಿದ್ರೆ ಕನಿಷ್ಠ ಮೂರು ಲಕ್ಷ ಬೇಕು. ಆದರೆ ಸಂತೋಷ್ ಗೆ ಅದರ ಶೂಟಿಂಗ್ ಹಂತದಲ್ಲಿ ಧನದ ಕೊರತೆಯಾಯಿತು.
ಆದರೆ ಸಂತೋಷ್ ಯುವ ಚಿಂತನೆಯ ನಿರ್ದೇಶಕ. ಅವರ ಕೈಗೆ ಯಾರೇ ಆದರು ಪ್ರೀತಿ ಪ್ರೇಮದ ಕತೆಯೊಂದನ್ನು ಕೊಟ್ಟರೆ ಅದೊಂದು ಅದ್ಭು ಕಲಾ ಕುಸುಮ ಆಗೋದರಲ್ಲಿ ಯಾವ ಸಂಶಯವೂ ಇಲ್ಲ.