ಕಾಪು : ಹಳೆ ಸಾಮಗ್ರಿಗಳನ್ನು ತುಂಬಿಕೊಂಡು ಚಲಿಸುತ್ತಿದ್ದ ಮಿನಿ ಟೆಂಪೋ ಒಂದು ಚಕ್ರ ಸ್ಫೋಟಗೊಂಡು ಮಗುಚಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ನಾರಾಯಣ ಗುರು ಸಂಘದ ಸಮೀಪ ಗುರುವಾರ ನಡೆದಿದೆ.
ಉಡುಪಿ ಕಡೆಯಿಂದ ಉಚ್ಚಿಲಕ್ಕೆ ಚಲಿಸುತ್ತಿದ್ದ ಮಿನಿ ಟೆಂಪೊದ ಹಿಂಭಾಗದ ಚಕ್ರ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿ ಬಿದ್ದಿದೆ. ಅಪಘಾತದಲ್ಲಿ ಚಾಲಕ ಹಾಗೂ ಸಹ ಪ್ರಯಾಣಿಕ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ವಾಹನ ಜಖಂಗೊಂಡಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English