ಮಂಗಳೂರು: ಮಾಜಿ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಅವರು ಈಗ ಕಾರು ಬಿಟ್ಟು ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುತ್ತಿದ್ದು ಯುವಕರಿಗೆ, ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‍ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಅವರು ಹೊಸದಾಗಿ ಸೈಕಲೊಂದನ್ನು ಖರೀದಿಸಿದ್ದು ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ.
ಸಣ್ಣ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿರುವ ಅಭಯಚಂದ್ರ ಜೈನ್ ಅವರು 71ರ ಇಳಿ ವಯಸ್ಸಿನಲ್ಲಿಲ್ಲೂ ಬಾಸ್ಕೆಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ಪ್ರತಿದಿನ ಆಡುತ್ತಿರುವುದಲ್ಲದೆ ವಾಕಿಂಗ್, ತನ್ನ ಚಾಲಕ ಬರುವುದಕ್ಕಿಂತ ಮೊದಲು ಕಾರು ಮತ್ತು ಬಸ್ ಚಾಲನೆಯನ್ನು ತಾವೇ ಮಾಡಿಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಮೂಡುಬಿದಿರೆವರೆಗೆ ಬಸ್ಸಿನಲ್ಲಿ ಬಂದು ಬಳಿಕ ಮನೆಗೆ ಹೋಗಲು ಮೂಡುಬಿದಿರೆಯಿಂದ ಆಟೋವನ್ನೇ ಬಳಸಿಕೊಳ್ಳುವ ಮೂಲಕ ಮಾದರಿಯಾಗಿದ್ದ ಅಭಯಚಂದ್ರ ಅವರು ಇದೀಗ ತಾನು ಸೈಕಲ್ ಸವಾರಿ ಮಾಡುವ ಮೂಲಕ ಜಿಮ್‍ಗೆ ಹೋಗಿ ತಮ್ಮ ಫಿಟ್‍ನೆಸ್ನ್ನು ಕಾಪಾಡಿಕೊಳ್ಳುತ್ತಿರುವ ಯುವಕರಿಗೆ, ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‍ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬ ಸಂದೇಶವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
Click this button or press Ctrl+G to toggle between Kannada and English