ರಿಟ್ಜ್ ಕಾರಿನಲ್ಲಿ ಅಕ್ರಮ ದನ ಸಾಗಾಟ, ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆದ ಆರೋಪಿಗಳು, ಗಾಳಿಯಲ್ಲಿ ಗುಂಡು

10:24 PM, Sunday, October 11th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ritz Car Cow smugglingಮೂಡುಬಿದಿರೆ: ರಿಟ್ಜ್  ಕಾರಿನಲ್ಲಿ ಅಕ್ರಮ ದನ ಸಾಗಾಟ ನಡೆಸುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಹತ್ನಿಸಿದ ಘಟನೆ ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.

ಮೂಡಬಿದಿರೆಯ ಸಮೀಪ ಮೂಡುಕೋಣಾಜೆ ಉಂಜೆಬೆಟ್ಟು ಬಳಿ ಇಂದು ನಸುಕಿನ ವೇಳೆ ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಗೋಕಳ್ಳರ ಮೇಲೆ ಶೂಟೌಟ್ ಮಾಡಿದ ಪೋಲಿಸರು 6 ದನಗಳನ್ನು ರಕ್ಷಿಸಿದ್ದಾರೆ.

ಶಿರ್ತಾಡಿ ಕಡೆಯಿಂದ ಹೌದಾಲ್ ಕಡೆಗೆ ಬರುತ್ತಿದ್ದ ರಿಟ್ಜ್  ಕಾರ್ ನಲ್ಲಿ ಆರು ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿಗಳು ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ.

ಮೂಡುಬಿದಿರೆ ಸರ್ಕಲ್ ಇನ್ಸ್ಪೆಕ್ಟರ್  ದಿನೇಶ್ ಕುಮಾರ್ ನೇತೃತ್ವದ ತಂಡ ಗೋಕಳ್ಳರ ಕಾರ್ ಗೆ ಮೊದಲು ಗುಂಡು ಹಾರಿಸಿದ್ದಾರೆ. ಮೊದಲ ಗುಂಡು ಕಾರ್ ಗೆ ತಗುಲಿದೆ. ಎರಡನೇ ಸುತ್ತಿನ ಗುಂಡು ಹಾರಿಸುವ ವೇಳೆ ದನ ಹಾಗೂ ಕಾರು ಬಿಟ್ಟು ಗೋಕಳ್ಳರು ಓಡಿ ಹೋಗಿ ಪರಾರಿಯಾಗಿದ್ದಾರೆ.ಕಾರು ಜಖಂಗೊಂಡಿದ್ದು, ಪೋಲಿಸರು ವಶಕ್ಕೆ ಪಡೆದಿದ್ದಾರೆ. ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌

ಆದರೆ ಆರೋಪಿಗಳು ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Ritz Car Cow smuggling

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English