ಮನೆ ಕಟ್ಟುವ ವಿಚಾರವಾಗಿ ಜಗಳವಾಡಿ ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದ ಪ್ರೌಢಶಾಲೆಯ ಶಿಕ್ಷಕಿ

4:33 PM, Tuesday, October 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sri Deviದಾವಣಗೆರೆ: ಮನೆ ಕಟ್ಟುವ ವಿಚಾರವಾಗಿ ಪತಿಯ ಜೊತೆ ಜಗಳ ಮಾಡಿಕೊಂಡ ಮಹಿಳೆಯೊಬ್ಬರು ಇಬ್ಬರು ಮಕ್ಕಳ ಜೊತೆ ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಶ್ರೀದೇವಿ (38), ಅನುಷಾ (10), ನೂತನ್ (08) ಆತ್ಮಹತ್ಯೆಗೆ ಶರಣಾದ ತಾಯಿ ಮಕ್ಕಳು.

ದಾವಣಗೆರೆ ನಗರದ ಹೊರವಲಯದ ಎಚ್ ಕಲ್ಪನಹಳ್ಳಿ ಬಳಿ ತುಂಗಭದ್ರ ಕಾಲುವೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆಯ ಜಯನಗರದಲ್ಲಿ ವಾಸವಾಗಿದ್ದ ಶ್ರೀದೇವಿ  ವೃತ್ತಿಯಲ್ಲಿ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಜೊತೆ ಮನೆ ಕಟ್ಟುವ ವಿಚಾರವಾಗಿ ಜಗಳ ಮಾಡಿಕೊಂಡಿ ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿದ್ದರು.

ಮಕ್ಕಳನ್ನು ತಮ್ಮ ಸ್ಕೂಟಿಯಲ್ಲಿ ಕರೆದುಕೊಂಡು ಬಂದು ತುಂಗಭದ್ರಾ ಕಾಲುವೆಗೆ ಹಾರಿದ್ದಾರೆ. ಶವಗಳನ್ನು ಹೊರ ತೆಗೆಯಲಾಗಿದ್ದು, ಜಿಲ್ಲಾಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English