80 ವರ್ಷದ ಅಜ್ಜಿಯನ್ನು ಕೊಲೆ ಮಾಡಿ, ಅಂಗಾಂಗಗಳನ್ನು ಕೋಣೆಯಲ್ಲಿ ಹರಡಿ ವಿಕೃತಿ ಮೆರೆದ ಮೊಮ್ಮಗ

1:40 PM, Wednesday, October 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

rossiಮುಂಬೈ:  ಮೊಮ್ಮಗನೊಬ್ಬ ತನ್ನ ಅಜ್ಜಿಯ ಕತ್ತು ಸೀಳಿ ಕೊಲೆ ಮಾಡಿದ್ದಲ್ಲದೇ ಆಕೆಯ ದೇಹದ ಅಂಗಾಂಗಗಳನ್ನು ಕೋಣೆಯ ತುಂಬಾ ಹರಡಿ ವಿಕೃತಿ ಮೆರೆದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ (25 ) ಎಂದು ಗುರುತಿಸಲಾಗಿದೆ. ಈತ ಸೋಮವಾರ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಬಳಿಕ ತನ್ನ ಅಜ್ಜಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರಿಸ್ಟೋಫರ್ ಪೋಷಕರು ಇಸ್ರೆಲ್ ನಲ್ಲಿ ನೆಲೆಸಿದ್ದಾರೆ. ಈತ ಪುನರ್ವಸತಿ ಕೇಂದ್ರದಿಂದ ವಾಪಸ್ಸಾದ ಬಳಿಕ ಅಜ್ಜಿ ಜೊತೆ ವಾಸವಾಗಿದ್ದನು ಎಂಬುದಾಗಿ ವರದಿಯಾಗಿದೆ.

ಊಟಕ್ಕೆ ಬಂದಿದ್ದ ತನ್ನ ಸಂಬಂಧಿಕರಲ್ಲಿ 80 ವರ್ಷದ ರೋಸಿ,  ಡಯಾಸ್ ಜೊತೆ ಮಾತನಾಡಬಾರದೆಂದು ಬಂದವರಲ್ಲಿ ಹೇಳಿದ್ದಾರೆ.  ಡಯಾಸ್ ಡ್ರಗ್ಸ್ ವ್ಯಸನಿಯಾಗಿದ್ದರಿಂದ ರೋಸಿ ಈ ರೀತಿ ಅವರಲ್ಲಿ ಹೇಳಿದ್ದರಂತೆ. ಊಟ ಮುಗಿಸಿ ಮಲಗಿದ್ದ ವೇಳೆ ಮಧ್ಯರಾತ್ರಿ ಸುಮಾರಿಗೆ ಡಯಾಸ್ ಚಾಕುವಿನಿಂದ ಅಜ್ಜಿಯ ಶಿರಚ್ಚೇದ ಮಾಡಿದ್ದಾನೆ. ಆಕೆಯ ದೇಹ ಅಂಗಾಂಗಗಳನ್ನು ಕೋಣೆಯಾದ್ಯಂತ ಹರಡಿದ್ದಾನೆ. ನಂತರ ಗೋವಾ ಭೇಟಿಯಲ್ಲಿದ್ದ ತನ್ನ ಪೋಷಕರಿಗೆ ಕರೆ ಮಾಡಿ ಅಜ್ಜಿಯನ್ನು ಹತ್ಯೆ ಮಾಡಿರುವ ಬಗ್ಗೆ ತಿಳಿಸಿದ್ದಾನೆ.

ಕೂಡಲೇ ಆತನ ತಂದೆ ಮುಂಬೈಗೆ ದೌಡಾಯಿಸಿದ್ದಾರೆ. ಈ ವೇಳೆ ಮನೆಯಲ್ಲಿಯೇ ಆರೋಪಿ ಡಯಾಸ್ ರಕ್ತದ ಮಡುವಿನಲ್ಲಿ ಕುಳಿತಿದ್ದನು. ಕೂಡಲೇ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಂತೆಯೇ ವಿಚಾರ ಅರಿತ ಕೂಡಲೇ ಪೊಲೀಸರು ಕೂಡ 10.15ರ ಸುಮಾರಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಘಟನೆ ಸಂಬಂಧ ಕ್ರಸ್ಟೋಫರ್ ಡಯಾಸ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English