ಹಿಂದೂಗಳನ್ನು ಅವಮಾನಿಸುವ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವನ್ನು ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿ

11:25 PM, Friday, October 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

laxmi bombಮಂಗಳೂರು  : ದೀಪಾವಳಿಯ ಹಿನ್ನೆಲೆಯಲ್ಲಿ ನಟ ಅಕ್ಷಯ ಕುಮಾರ ಇವರ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವು ನವೆಂಬರ್ 9 ರಂದು ಪ್ರದರ್ಶನಗೊಳ್ಳಲಿದೆ. ದೀಪಾವಳಿಯ ಹಿನ್ನಲೆಯಲ್ಲಿ ಇದರ ಹೆಸರನ್ನು ಉದ್ದೇಶಪೂರ್ವಕವಾಗಿ ‘ಲಕ್ಷ್ಮೀ ಬಾಂಬ್’ ಎಂದು ಇಡಲಾಗಿದೆ. ಆದ್ದರಿಂದ ನಮ್ಮ ಮೊದಲನೇ ಆಕ್ಷೇಪಣೆ ಈ ಚಲನಚಿತ್ರದ ಹೆಸರಿಗಿದ್ದು ಇದರಿಂದ ಕೋಟಿಗಟ್ಟಲೆ ಹಿಂದೂಗಳ ದೇವರಾಗಿರುವ ಶ್ರೀಲಕ್ಷ್ಮೀದೇವಿಯ ವಿಡಂಬನೆ ಮಾಡಲಾಗಿದೆ. ಇನ್ನೊಂದೆಡೆ ಹಿಂದೂ ದೇವತೆಗಳ ಅವಮಾನ ಮಾಡುವ ‘ಲಕ್ಷ್ಮೀ ಪಟಾಕಿ’ ಬಂದ್ ಮಾಡಲು ನಾವು ಕಳೆದ ಅನೇಕ ವರ್ಷಗಳಿಂದ ಪ್ರಬೋಧನೆ ಮಾಡುತ್ತಿರುವಾಗ, ಈ ಚಲನಚಿತ್ರದ ಹೆಸರಿನಿಂದ ಅವರಿಗೆ ಪುನಃ ಪ್ರೋತ್ಸಾಹವೇ ಸಿಗಲಿದೆ. ಅದರೊಂದಿಗೆ ಈ ಚಲನಚಿತ್ರದ ನಾಯಕನ ಹೆಸರು ‘ಆಸಿಫ್’ ಹಾಗೂ ನಾಯಕಿಯ ಹೆಸರು ‘ಪ್ರಿಯಾ ಯಾದವ’ ಇಟ್ಟಿರುವುದು ಕಂಡು ಬಂದಿದೆ, ಅಂದರೆ ಇದರಿಂದ ಮುಸಲ್ಮಾನ ಯುವಕ ಹಾಗೂ ಹಿಂದೂ ಯುವತಿಯ ಸಂಬಂಧವನ್ನು ತೋರಿಸುವ ಮೂಲಕ ಉದ್ದೇಶಪೂರ್ವಕವಾಗಿ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡಿದೆ. ಆದ್ದರಿಂದ ‘ಲಕ್ಷ್ಮೀ ಬಾಂಬ್’ ಚಲನಚಿತ್ರದ ಪ್ರದರ್ಶನದ ಮೇಲೆ ಕೂಡಲೇ ನಿರ್ಬಂಧ ಹೇರಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಇವರು ಒತ್ತಾಯಿಸಿದ್ದಾರೆ.

mohana gowdaಗೌಡ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, ಒಂದುಕಡೆ ‘ಮೊಹಮ್ಮದ : ದಿ ಮೆಸೆಂಜರ್ ಆಫ್ ಗಾಡ್’ ಈ ಚಲನಚಿತ್ರದಿಂದಾಗಿ ಮುಸಲ್ಮಾನರ ಧಾರ್ಮಿಕ ಭಾವನೆಯನ್ನು ನೋವಾಗುತ್ತದೆ ಎಂದು ಅದರಲ್ಲಿ ಸ್ವತಃ ಹಸ್ತಕ್ಷೇಪ ಮಾಡಿ ನಿರ್ಬಂಧ ಹೇರುವಂತೆ ಮಹಾರಾಷ್ಟ್ರದ ಗೃಹಸಚಿವ ಕೇಂದ್ರ ಸರಕಾರದ ಬಳಿ ಶಿಫಾರಸ್ಸನ್ನು ಮಾಡಿತ್ತು. ಅದೇ ರೀತಿ ಹಿಂದೂಗಳ ದೇವತೆಗಳ ಅವಮಾನ ಮಾಡುವ ‘ಲಕ್ಷ್ಮೀ ಬಾಂಬ್’ ಚಲನಚಿತ್ರದ ಮೇಲೆಯೂ ಕೇಂದ್ರ ಹಾಗೂ ಕರ್ನಾಟಕದ ರಾಜ್ಯ ಸರಕಾರವು ನಿರ್ಬಂಧದ ಶಿಫಾರಸ್ಸನ್ನು ಮಾಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ, ಎಂದರು.

ಈ ಚಿತ್ರದ ಟ್ರೈಲರ್‌ನಲ್ಲಿ ಅಕ್ಷಯ ಕುಮಾರ್ ಭೂತ ಪೀಡಿತ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದರಲ್ಲಿರುವ ಭೂತ ತೃತೀಯಲಿಂಗಕ್ಕೆ ಸೇರಿದೆ ಎಂದು ತೋರುತ್ತದೆ. ಅಲ್ಲದೆ, ದೊಡ್ಡ ಕೆಂಪು ಕುಂಕುಮ, ಕೆಂಪು ಸೀರೆ ಧರಿಸಿ, ಕೂದಲನ್ನು ಸಡಿಲವಾಗಿ ಬಿಟ್ಟು, ಕೈಯಲ್ಲಿ ತ್ರಿಶೂಲ ಹಿಡಿದು ನರ್ತಿಸುವುದು ಅಂದರೆ ಒಂದು ರೀತಿ ದೇವಿಯ ರೂಪದಂತೆ ನಟಿಸುವ ಪ್ರಯತ್ನವು ಖಂಡನೀಯವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ‘ಲಕ್ಷ್ಮಿ ಬಾಂಬ್’ ಹೆಸರಿನಲ್ಲಿ ಚಲನಚಿತ್ರಗಳನ್ನು ಮಾಡುತ್ತಿರುವವರು ಈದ್ ಸಂದರ್ಭದಲ್ಲಿ ‘ಆಯೆಷಾ ಬಾಂಬ್’, ‘ಶಬಿನಾ ಬಾಂಬ್’, ‘ಫಾತಿಮಾ ಬಾಂಬ್’ ಹೆಸರಿನಲ್ಲಿ ಚಲನಚಿತ್ರಗಳನ್ನು ಮಾಡಲು ಧೈರ್ಯ ಮಾಡುತ್ತಾರೆಯೇ? ಚಲನಚಿತ್ರಗಳ ನಿರ್ಮಾಪಕರು ಮತ್ತು ಆಡಳಿತಗಾರರು ಮುಸಲ್ಮಾನರ ಧಾರ್ಮಿಕ ಭಾವನೆಗಳ ಬಗ್ಗೆ ಯೋಚಿಸುವಂತೆ ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಏಕೆ ಯೋಚಿಸುವುದಿಲ್ಲ? ಹಿಂದೂಗಳೊಂದಿಗೆ ಪಕ್ಷಪಾತ ಮಾಡುವುದೇ ಸರ್ವಧರ್ಮಸಮಭಾವದ ವ್ಯಾಖ್ಯೆಯಾಗದೆಯೇ ? ಹಿಂದೂವಿರೋಧವೇ ಪ್ರಸ್ತುತ ಜಾತ್ಯತೀತತೆಯಂತಿದೆ ಎಂದು ಗೌಡ ಇವರು ಹೇಳಿದ್ದಾರೆ.

ಚಲನಚಿತ್ರ ನಿರ್ಮಾಪಕಿ ಶಬೀನಾ ಖಾನ್ ಹಾಗೂ ಬರಹಗಾರ ಫರ್ಹಾದ್ ಸಾಮಜಿ ಅವರು ಉದ್ದೇಶಪೂರ್ವಕವಾಗಿ ಹಿಂದೂದ್ವೇಷ ಹಬ್ಬಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಆದರೆ, ಈ ಬೇಡಿಕೆಗಳನ್ನು ಗಮನಿಸದಿದ್ದರೆ ತೀವ್ರ ಆಂದೋಲನ ಮಾಡುವುದಾಗಿ ಶ್ರೀ. ಗೌಡ ಇವರು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English