ತೀಥ೯ ಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ಜೀವ ನದಿ

3:05 PM, Saturday, October 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Tala Kaveryಮಡಿಕೇರಿ : ಕಾವೇರಿ ಶನಿವಾರ ಬೆಳಗ್ಗೆ ಕನ್ಯಾ  ಲಗ್ನದಲ್ಲಿ 7 ಗಂಟೆ 04 ನಿಮಿಷಕ್ಕೆ ಬ್ರಹ್ಮಗಿರಿ ತಪ್ಪಲಿನ ಪವಿತ್ರ ತಾಣದಲ್ಲಿ ತೀಥ೯ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ.

ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿಬ್ರಹ್ಮಕುಂಡಿಕೆಯ ಬಳಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು,  ಈ ಬಾರಿ ಕೊರೊನಾ ಹಿನ್ನೆಲೆ ತಲಕಾವೇರಿ ಕ್ಷೇತ್ರದಲ್ಲಿ ಕೇವಲ 500-600 ಭಕ್ತರಿಂದ ಮಾತ್ರ ಕಾವೇರಿ ತೀರ್ಥೋದ್ಭವ ದಶ೯ನಕ್ಕೆ ಅವಕಾಶ ನೀಡಲಾಗಿತ್ತು. ತೀರ್ಥೋದ್ಭವದ ವೇಳೆ ಜೈಜೈ ಮಾತಾ,ಕಾವೇರಿ ಮಾತೆ ಎಂಬ ಉದ್ಘೋಷದ ಕೇಳಿ ಬಂತು.

ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನೆರವೇರಿತು. ಅಲ್ಲಿಯೂ ಭಕ್ತರ ಸಂಖ್ಯೆ ಕಡಿಮೆಯಿತ್ತು. ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಬ್ರಹ್ಮ ಕುಂಡಿಕೆ, ಅಗಸ್ತೇಶ್ವರ ದೇವಾಲಯ ಮತ್ತು ಭಾಗಮಂಡಲ ದೇವಾಲಯಗಳಿಗೆ ವಿದ್ಯುತ್ ದೀಪ ಮತ್ತು ಪುಷ್ಪಾಲಂಕಾರ ಮಾಡಲಾಗಿದೆ.

ಕೊರೊನಾ ಸೋಂಕು ಹಿನ್ನಲೆ ತೀರ್ಥೋದ್ಭವ ಜಾತ್ರೆಗೆ ಇತಿಹಾಸದಲ್ಲಿಯೇ ಅತಿ ವಿರಳ ಭಕ್ತರಿಂದ ಕಾವೇರಿ ತೀರ್ಥೋದ್ಭವ ವೀಕ್ಷಣೆ ನಡೆದಿದೆ. ಮಳೆ, ಮಂಜು ಇಲ್ಲದ ಅಹ್ಲಾದಕರ ವಾತಾವರಣದಲ್ಲಿ ತೀಥ೯ರೂಪಿಣಿಯಾಗಿ ಜಗನ್ಮಾತೆ ಕಾವೇರಿ ಉಗಮಿಸಿದ್ದು, ಗಂಟೆ ಬಳಿಕ ತಲಕಾವೇರಿ ಕ್ಷೇತ್ರಕ್ಕೆ ಎಲ್ಲಾ ಭಕ್ತರಿಗೂ ಪ್ರವೇಶಾವಕಾಶ ನೀಡಲಾಗಿದೆ.

Talakavery ಇನ್ನು ಈ ಬಾರಿ ಕುಂಡಿಕೆಯಿಂದ ತೀಥ೯ ಪಡೆಯಲು ಅವಕಾಶವಿಲ್ಲವನ್ನು ಭಕ್ತರಿಗೆ ನೀಡಿಲ್ಲ. ಹೀಗಾಗಿ ದೇವಾಲಯ ಸಮಿತಿಯಿಂದ ಪ್ರತ್ಯೇಕ ಸ್ಥಳದಲ್ಲಿ ತೀಥ೯ ನೀಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಬ್ರಹ್ಮ ಕುಂಡಿಕೆ ಮುಂದಿನ ಕೊಳದಲ್ಲಿಯೂ ಪುಣ್ಯ ಸ್ನಾನಕ್ಕೆ ಅವಕಾಶ ನೀಡಿಲ್ಲ. ಇನ್ನು ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ.

ತೀರ್ಥ ವಿತರಣೆಗೆ ಐದು ಕೌಂಟರ್ ತೆರಯಾಗಿದ್ದು, ಪ್ರತೀ ಕೌಂಟರ್ ಬಳಿ ತಲಾ ಎರಡು ಮೂರು ಕೊಳಾಯಿಗಳನ್ನು ಇಟ್ಟು ವ್ಯವಸ್ಥೆ ಮಾಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ದೇವಾಲಯ ಸಮಿತಿ ಸದಸ್ಯರು, ಆಯ್ದ ಜನರಿಂದ ಮಾತ್ರ ಈ ಬಾರಿ ಕಾವೇರಿ ತೀಥೋ೯ದ್ವವ ವೀಕ್ಷಣೆ ನಡೆದಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English