ಮಂಗಳೂರಿನಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಿಟಿ ಬಸ್​

11:17 PM, Tuesday, October 20th, 2020
Share
1 Star2 Stars3 Stars4 Stars5 Stars
(No Ratings Yet)
Loading...

Ganesh Prasad busಮಂಗಳೂರು  : ಮಂಗಳೂರಿನ ಬಸ್ ಮಾಲೀಕ ರೊಬ್ಬರು  ಡ್ರಗ್ಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬರಹಗಳನ್ನು ‌ತಮ್ಮ ಬಸ್ನಲ್ಲಿ ಬರೆಸಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್ನಿಂದ ಮಂಗಳಾದೇವಿಯ ನಡುವೆ ಸಂಚರಿಸುವ ‘ಶ್ರೀ ಗಣೇಶ್ ಪ್ರಸಾದ್’ ಎಂಬ 27 ನಂಬರ್ ಸಿಟಿ ಬಸ್ನಲ್ಲಿ‌ ಮಾಲೀಕ  ದಿಲ್ ರಾಜ್ ಆಳ್ವ ಅವರು ಡ್ರಗ್ಸ್ ಜಾಗೃತಿ ಬರಹ ಬರೆಸಿದ್ದಾರೆ.

ಬಸ್ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ಅವರು ತಮ್ಮ ಬಸ್ಗಳಲ್ಲಿ ತುಳುಲಿಪಿ ಕಲಿಕೆ, ನೀರಿನ ಉಳಿತಾಯ, ಸ್ವಚ್ಛ ಭಾರತದ ಬಗ್ಗೆಯೂ ಜಾಗೃತಿ ಬರಹಗಳನ್ನು ಬರೆಸಿದ್ದರು‌.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English